ಪುತ್ತೂರು : ಮನೆಯ ಪರಿಸರದಲ್ಲಿ ಲಭ್ಯವಿರುವ ಸ್ಥಳದಲ್ಲಿ ಹಣ್ಣು ತರಕಾರಿಗಳನ್ನು ಬೆಳೆಸಿ ಬಳಸುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚಿನ ವಸ್ತುಗಳು ವಿಷಕಾರಿ ಅಂಶಗಳನ್ನು ಹೊಂದಿದ್ದು ಇದರ ಬಗ್ಗೆ ಜಾಗೃತಿಯ ಅಗತ್ಯವಿದೆಯೆಂದು ಅಡ್ಯನಡ್ಕದ ವಾರಣಾಸಿ ಫಾರ್ಮ್ಸ್ ನ ಡಾ. ನಿವೇದಿತಾ ತಿಳಿಸಿದರು.
ಪುತ್ತೂರು ನಗರದ ಶ್ರೀಮಾ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ.ಮೆಲ್ಕಾರು ಕೇಂದ್ರ ಸಮಿತಿಯ ಸಭೆಯಲ್ಲಿ ಅವರು ಸಾವಯವ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು.
ಪುತ್ತೂರು ವಿವೇಕಾನಂದ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಪ್ರೊ. ವೇದವ್ಯಾಸ ರಾಮಕುಂಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಮಾತನಾಡಿ ತಾಲೂಕು ಘಟಕಗಳ ಪುನಸ್ಚೇತನ, ಪ್ರತಿಷ್ಠಾನದ ಸದಸ್ಯರಿಗೆ ಸ್ಥಳ ಭೇಟಿ ಕಾರ್ಯಕ್ರಮ ಮತ್ತು ಒಂದು ದಿನದ ಕಾರ್ಯಗಾರ ಏರ್ಪಡಿಸುವ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಹಿಳಾ ಘಟಕದ ಸಂಚಾಲಕಿ ವತ್ಸಲಾ ರಾಜ್ಣಿ, ಶಂಕರಿ ಶರ್ಮಾ ಪುತ್ತೂರು, ಈಶ್ವರ ಭಟ್ ಗುಂಡ್ಯಡ್ಕ, ಉದಯಶಂಕರ ರೈ ಪುಣಚ, ಪುತ್ತೂರು ಘಟಕದ ಅಧ್ಯಕ್ಷ ಚಂದ್ರಶೇಖರ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ ಪುತ್ತೂರು ಉಪಸ್ಥಿತರಿದ್ದರು.
ಶಂಕರಿ ಶರ್ಮಪ್ರಾರ್ಥಿಸಿ ಪ್ರತಿಷ್ಠಾನದ ಸಂಚಾಲಕ ಭಾಸ್ಕರ ಬಾರ್ಯ ಸ್ವಾಗತಿಸಿದರು. ಕೋಶಾಧಿಕಾರಿ ಅನಾರು ಕೃಷ್ಣಶರ್ಮ ವಂದಿಸಿದರು. ಪ್ರಧಾನ ಕಾರ್ಯದರ್ಶಿ ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು.