ವಿಟ್ಲ: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ನಡೆಯುತ್ತಿದ್ದ ವೇಳೆ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಸಿಬ್ಬಂದಿಗಳ ಜೊತೆ ಎಸ್ ಐ ಠಾಣಾ ವ್ಯಾಪ್ತಿಯ ಪಳಿಕೆ ಎಂಬಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ.
ಬಳಿಕ ವಿಟ್ಲ ಠಾಣೆಯಲ್ಲಿ ಮಧ್ಯವರ್ತಿ ಮಾಡುತ್ತಿರುವ ಈ ಹಿಂದೆ ಪಿರಿಯಾಪಟ್ಟಣ ಮತ್ತು ಉಪ್ಪಿನಂಗಡಿಯಲ್ಲಿ ಹನಿಟ್ರಾಪ್ ನಡೆಸಿ ಸಿಕ್ಕಿಬಿದ್ದಿರುವ ಆರೋಪಿ ವಿಟ್ಲದ ಜಮಾಲ್ ಜೊತೆ ಎಸೈ ಅವರು ಸೇರಿಕೊಂಡು ಜುಗಾರಿ ಆರೋಪಿಗೆ ಕರೆ ಮಾಡಿದ್ದಾರೆ.
ಜಮಾಲ್ ಜೊತೆ ಮಾತುಕತೆ ನಡೆಸಿ ಮೂವತ್ತು ಸಾವಿರ ನೀಡಬೇಕು. ಇಲ್ಲವಾದರೆ ಸ್ಥಳೀಯ ಹದಿನೈದು ಜನರಿಂದ ದೂರು ಪಡೆದು ಬಂಧಿಸುತ್ತೇನೆಂದು ಆರೋಪಿಗಳ ಪೈಕಿ ಒಬ್ಬರಿಗೆ ಹೇಳಿದ್ದಾರೆ. ಇನ್ನು ಈ ವಿಚಾರ ಮಾಧ್ಯಮದಲ್ಲಿ ಬಂದರೆ ಮತ್ತು ಹಿರಿಯ ಪೊಲೀಸರಿಗೆ ಹೇಳಿದರೆ ಮನೆಗೆ ನುಗ್ಗಿ ಕಡಿಯುತ್ತೇವೆಂದು ಪ್ರೋಕರ್ ಜಮಾಲ್ ಧಮ್ಮಿ ಹಾಕಿದ್ದಾನೆ. ಈ ಎಲ್ಲಾ ಆಡಿಯೋಗಳು ಮತ್ತು ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸ್ ಪಿ ಯವರಿಗೆ ಸಾಮಾಜಿಕ ಕಾರ್ಯಕರ್ತರೊಬ್ಬರು ಮನವಿ ಮಾಡಿದ್ದಾರೆ.