ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಹಿಂದೂಗಳ ಹತ್ಯೆಗೆ ಪ್ರತಿಕಾರವಾಗಿ ನಡೆದ “ಆಪರೇಷನ್ ಸಿಂಧೂರ” ಕಾರ್ಯಾಚರಣೆ ಹಿನ್ನಲೆಯಲ್ಲಿ ವೀರ ಸೖನಿಕರ ಮನೋಸ್ಥೖರ್ಯವನ್ನು ಹೆಚ್ಚಿಸಲು ಮತ್ತು ಪ್ರಧಾನಮಂತ್ರಿಯವರಿಗೆ ಶಕ್ತಿ ನೀಡಲು ನರಿಮೊಗರು ಶಕ್ತಿ ಕೇಂದ್ರದಿಂದ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಲಾಯಿತು.
ನರಿಮೊಗರು ಶಕ್ತಿ ಕೇಂದ್ರದ ವತಿಯಿಂದ ಮಜಲುಮಾರು ಉಮಾಮಹೇಶ್ವರ ದೇವಸ್ಥಾನದಲ್ಲಿ ಅಪರೇಶನ್ ಸಿಂಧೂರ ಹೆಸರಿನಲ್ಲಿ ಪಹಲ್ಗಾಂನಲ್ಲಿ ನಮ್ಮ ಹಿಂದೂಗಳನ್ನು ಕೊಂದ ಉಗ್ರವಾದಿಗಳನ್ನು ಅವರದ್ದೇ ನೆಲದಲ್ಲಿ ಮಣ್ಣುಮಾಡಿದ ನಮ್ಮ ವೀರ ಸೖನಿಕರ ಮನೋಸ್ಥೖರ್ಯವನ್ನು ಹೆಚ್ಚಿಸಲು ಹಾಗೂ ಪ್ರಧಾನಮಂತ್ರಿಯವರಿಗೆ ಶಕ್ತಿ ನೀಡಲು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಶಕ್ತಿಕೇಂದ್ರದ ಪ್ರಮುಖರು, ಗ್ರಾಮ ಪಂಚಾಯಿತಿನ ಸದಸ್ಯರು, ಸಿಎ ಬ್ಯಾಂಕಿನ ನಿರ್ದೇಶಕರು ಮತ್ತು ಹಿರಿಯರು ಉಪಸ್ಥಿತರಿದ್ದರು