ಮಂಗಳೂರು : ಪಹಲ್ಗಾಮ್ ದಾಳಿಯ ನಂತರ ಭಾರತ ಪ್ರತಿಕಾರವಾಗಿ ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ಥಾನವನ್ನು ದಾಳಿ ಮಾಡಿ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆಯ ಪರಿಸ್ಥಿತಿ ಉಂಟಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಅಮಾಯಕರ ಬಲಿಯನ್ನು ತೆಗೆದುಕೊಂಡ ಮಾಕಿಸ್ತಾನವನ್ನು ಸಹಿಸದ ಬಾರತ ಪ್ರತಿಕಾರವಾಗಿ ‘ಆಪರೇಷನ್ ಸಿಂಧೂರ್’ ಮೂಲಕ ಪ್ರತಿಕಾರ ಯುದ್ಧಗಳು ನಡೆಯುತ್ತಿತ್ತಲೇ ಇವೆ. ಈ ಹಿನ್ನಲೇ ಇಡೀ ದೇಶವೇ ನಮ್ಮ ಸೈನ್ಯಕ್ಕೆ ಬೆನ್ನೆಲುಬಾಗಿ ನಿಂತು ಪ್ರಾರ್ಥಿಸುತ್ತಿರುವ ವೇಳೆ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ದೇಶವಿರೋಧಿ ಪೋಸ್ಟ್ ಒಂದನ್ನು ತನ್ನ ಇನ್ಸಾಗ್ರಾಂಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದೀಗ ಮಂಗಳೂರಿನಾದ್ಯಂತ ಜನರ ಕಣ್ಣಿಗೆ ಗುರಿಯಾಗಿದದ್ದು ಮಾತ್ರವಲ್ಲದೆ ಆ ಪೋಸ್ಟ್‌ಗೆ ಪ್ರತಿಯಾಗಿ ಸಮರ್ಥನೆ ಮಾಡಿಕೊಂಡಿದ್ದಾಳೆ.
ದೇಶಕ್ಕೆ ವಿರೋದವನ್ನು ವ್ಯಕ್ತ ಪಡಿಸಿದ ಈಕೆ ಮೂಲತಃ ಬೆಳ್ತಂಗಡಿ ಸಮೀಪದ ಬೆಳಾಲು ನಿವಾಸಿ ರೇಷ್ಮಾ ಎನ್ ಬಾರಿಗೆ ಎನ್ನಲಾಗಿದೆ. ಪ್ರಸ್ತುತ ಮಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸ್ನಾತಕ್ಕೋತ್ತರ ಪದವಿ ಓದುತ್ತಿದ್ದು, ಇದೀಗ ಆಕೆ ಹಾಕಿರುವ ಪೋಸ್ಟ್ ಭಾರೀ ಚರ್ಚೆಗೆ ಒಳಪಟ್ಟಿದೆ. ಸಾಮಾಜಿಕ ಜಾಲತಾಣದಲ್ಲಿ ರೇಷ್ಮಾ ‘ನನ್ನ ಮನೆಯ ದೀಪಕ್ಕೆ ಅವನ ಮನೆಯ ಹಣತೆಯ ತಂದೆ ಅಲ್ಲಿ ನಂದಿ ಹೋಯಿತು ಬೆಳಕು ಅವನ ಮನೆಯ ಬೆಳಕಿಗೆ ನನ್ನೊಳಗಿನ ದೀಪ… ಬೆಳಕಿನ ವಿಜೃಂಭಣೆಗಾಗಿ ಹೋರಾಟ ಜಯಿಸಿದು ಕತಲು… ಎಲ್ಲೆಲ್ಲೂ ಕತ್ತಲು…! -ರೇಷ್ಮಾ ಎನ್ ಬಾರಿಗ #dikkaraoperationsindura’ ಎಂಬುವುದಾಗಿ ಬರೆದುಕೊಂಡಿದ್ದಾಳೆ. ಭಾರತದ ಪ್ರತಿಕಾರವನ್ನ ವಿರೋಧಿಸಿ ಭಯೋತ್ಪದನೆಯನ್ನ ಸಮರ್ಥಿಸುವ ಹೀನ ಮನಸ್ಥಿತಿಗೆ ದಿಕ್ಕಾರವಿರಲಿ, ಮಂಗಳೂರು ಕಾಲೇಜಿನ ದೇಶದ್ರೋಹಿ ವಿದ್ಯಾರ್ಥಿನಿಯ ಸಂದೇಶವನ್ನ ಗಮನಿಸಿ ಎಂದು ವಿದ್ಯಾರ್ಥಿ ಸಂಘಟನೆಗಳು ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳುತ್ತಿದ್ದಾರೆ. ಮಾತ್ರವಲ್ಲದೆ ಸಾರ್ವಜನಿಕರು ಕೂಡ ರೇಷ್ಮಾಳ ವಿರುದ್ಧ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ದೇಶವಿರೋಧದ ಪೋಸ್ಟ್ ವೈರಲ್ ಆದ ತಕ್ಷಣ ತನ್ನನ್ನು ತಾನು ಸಮರ್ಥಿಸಿಕೊಳ್ಳಲು ರೇಷ್ಮಾ ಎನ್ ಬಾರಿಗ ಮತ್ತೆ ಸಮರ್ಥನೆ ಪೋಸ್ಟ್ ಒಂದನ್ನು ನಿನ್ನೆ (ಮೇ.8) ಮತ್ತೆ ಹಂಚಿಕೊಂಡಿದ್ದಾಳೆ. ಅದರಲ್ಲಿ ‘ಭಾರತ ದೇಶದ ಮೇಲೆ ಅಪಾರ ಪ್ರೀತಿ ಇದೆ, ಗೌರವ ನನಗಿದೆ. ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಯು ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯಿಂದ ಬದುಕಬೇಕು ಎಂಬುದು ನನ್ನ ಕಾಳಜಿ. ಈ ದೇಶದಲ್ಲಿ ಹುಟ್ಟಿರುವ ಬಗ್ಗೆ ಹೆಮ್ಮೆ ಇದೆ. ಏಕೆಂದರೆ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಭಾರತ. ಈ ದೇಶದ. ಮಣ್ಣಿನ ಮಕ್ಕಳಾದ ನಾವು ದ್ವೇಷದ ಕಾರಣ, ಭಯೋತ್ಪಾದನೆಯ ಕಾರಣಕ್ಕಾಗಿ ಮಣ್ಣಾಗುವುದನ್ನು, ನೋವುಗಳನ್ನು ಅನುಭವಿಸುವುದು ನನಗಿಷ್ಟವಿಲ್ಲ. ಯಾವುದೇ ಯುದ್ಧ ಆದಾಗ ಮಡಿಯುವವರು ಒಂದೆಡೆಯಾದರೆ ಆಯಾ ದೇಶದ ಬಹುತೇಕರು ವಿವಿಧ ಕಾರಣಗಳಿಗಾಗಿ ನೋವು ಅನುಭವಿಸುವಂತಾಗುತ್ತದೆ. ಭಾರತದ ಮೇಲೆ ಭಯೋತ್ಪಾದನೆಯ ಕರಿನೆರಳು ಬೀಳದಿರಲಿ, ಶಾಂತಿ, ಸೌಹಾರ್ದ ನೆಲೆಸಲಿ. ಭಯೋತ್ಪಾದನೆ ನಿರ್ಮೂಲನೆಯಾಗಲಿ, ಸಾವು ನೋವು ಇಲ್ಲದಾಗಲಿ ಎನ್ನುವುದಷ್ಟೇ ನನ್ನ ಉದ್ದೇಶ. – ರೇಷ್ಮಾ ಎನ್ ಬಾರಿಗೆ’ ಎಂದು ಬರೆದುಕೊಂಡಿದ್ದಾಳೆ. ಅದರೆ ಆಕೆಯ ಸಮರ್ಥನೆ ವ್ಯರ್ಥವಾಗಿದೆ. ಭಾರತದಲ್ಲಿ ಇದ್ದುಕೊಂಡು ದೇಶದ ಸತ್ಕಾರ್ಯವ ವಿರೋಧಿಸುವ ಮಂಗಳೂರಿನ ವಿದ್ಯಾರ್ಥಿನಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಲಾಗುತ್ತಿದೆ.