ನಾಳ : ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ ಜರಗಿದ ಸಾಕೇತ ಸಾಮ್ರಾಜ್ನಿ ಯಕ್ಷಗಾನ ಪ್ರದರ್ಶನದಲ್ಲಿ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್ ಇವರನ್ನು ಯಕ್ಷ ಕಲಾಭಿಮಾನಿಗಳು ನಾಳ- ಗೇರುಕಟ್ಟೆ ವತಿಯಿಂದ ಗೌರವಿಸಲಾಯಿತು .
60ರ ಹರೆಯದ ಕಲಾವಿದ ಶೆಟ್ಟಿಗಾರ್ ಅನಾರೋಗ್ಯದಿಂದಿದ್ದು ಅವರಿಗೆ ಧೈರ್ಯ ತುಂಬುವುದಕ್ಕಾಗಿ ಯಕ್ಷ ಕಲಾಭಿಮಾನಿಗಳ ನೆರವನ್ನು ಈ ಮೂಲಕ ನೀಡಲಾಯಿತು. ಗೌರವ ಸ್ವೀಕರಿಸಿದ ಶೆಟ್ಟಿಗಾರ್ ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮೇಳದ ಭಾಗವತರಾದ ರವಿಚಂದ್ರ ಕನ್ನಡಿಕಟ್ಟೆ, ಮೇಳದ ಪ್ರಬಂಧಕರಾದ ಹರೀಶ ಬಳಂತಿಮೊಗರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಮತ್ತು ದೇವಳದ ವ್ಯವಸ್ಥಾಪನ ಸಮಿತಿಯ ಸದಸ್ಯ ರಾಘವ. ಎಚ್ ಗೇರುಕಟ್ಟೆ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಶರತ್ ಕುಮಾರ್ ಶೆಟ್ಟಿ, ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಯಾದವ್ ಗೌಡ ಮುದ್ದುಂಜ, ಕಾರ್ಯಕ್ರಮದ ಸಂಘಟಕರಾದ ಭುವನೇಶ್ ಗೇರುಕಟ್ಟೆ , ಉಮೇಶ್ ಶೆಟ್ಟಿ, ಸಂಬೊಳ್ಯ, ಗಿರೀಶ್ ಶೆಟ್ಟಿ ನಾಳ ಉಪಸ್ಥಿತರಿದ್ದರು.
ದೇವಳದ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ರಾಜೇಶ್ ಪೆರ್ಮುಡ ಕಾರ್ಯಕ್ರಮ ನಿರೂಪಿಸಿದರು.