ಮಂಗಳೂರಿನ ಬಳ್ಳಾಲ್ ಬಾಗ್ ಪತ್ತುಮಡಿ ಸೌಧದಲ್ಲಿ ನೂತನವಾಗಿ ರಚಿತವಾದ ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಕಲಾವಿದರ ಘಟಕದ ಸಭೆಯು ಅಧ್ಯಕ್ಷರಾದ ರಾಜಾರಾಮ ಹೊಳ್ಳ ಕೈರಂಗಳ ಇವರ ಅಧ್ಯಕ್ಷತೆಯಲ್ಲಿ ಜರಗಿತು.
ಹವ್ಯಾಸಿ ಘಟಕದಿಂದ ಪ್ರತಿ ತಿಂಗಳಲ್ಲಿ ಒಂದು ಕಾರ್ಯಕ್ರಮವನ್ನು ಬೇರೆ ಬೇರೆ ಸ್ಥಳಗಳಲ್ಲಿ ನಡೆಸುವ ಬಗ್ಗೆ, ಯಕ್ಷಗಾನ ಸಂಘಗಳ ಅರ್ಹ ಸದಸ್ಯರನ್ನು ಘಟಕಕ್ಕೆ ಸೇರ್ಪಡೆಗೊಳಿಸುವುದರೊಂದಿಗೆ ಆಯಾಯ ಪರಿಸರದಲ್ಲಿ ಯಕ್ಷಗಾನೀಯ ಕಾರ್ಯಕ್ರಮಗಳನ್ನು ನಡೆಸುವ ಬಗ್ಗೆ ಚರ್ಚಿಸಲಾಯಿತು.
ಜೂನ್ 1ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ ಯಕ್ಷಧ್ರುವ ಪಟ್ಲ ಫೌಂಡೇಶನ್ ದಶಮಾನೋತ್ಸವ ಕಾರ್ಯಕ್ರಮದ ಯಶಸ್ಸಿಗೆ ಸಂಪೂರ್ಣ ಸಹಕಾರ ನೀಡುವುದು ಮತ್ತು ಹವ್ಯಾಸಿ ಕಲಾವಿದರ ಮಾಹಿತಿ ಸಂಗ್ರಹಣೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಘಟಕದ ಗೌರವಾಧ್ಯಕ್ಷರಾದ ಮಧುಕರ ಭಾಗವತ ಕುಳಾಯಿ, ಉಪಾಧ್ಯಕ್ಷರಾದ ತೋನ್ಸೆ ಪುಷ್ಕಲ ಕುಮಾರ್, ದಿವಾಕರ ಆಚಾರ್ಯ ಗೇರುಕಟ್ಟೆ, ಕೋಶಾಧಿಕಾರಿ ವಿಜಯ ಶಂಕರ ಆಳ್ವ ಮಿತ್ತಲಿಕೆ, ಸಹ ಕಾರ್ಯದರ್ಶಿ ಗಣೇಶ್ ಬಿ ಕುಂಜತ್ತೂರು, ಸಹ ಸಂಚಾಲಕರಾದ ಹರಿಶ್ಚಂದ್ರ ನಾಯ್ಗ ಮಾಡೂರು ಭಾಗವಹಿಸಿದ್ದರು. ಘಟಕದ ಸಂಚಾಲಕರಾದ ಸದಾಶಿವ ಆಳ್ವ ತಲಪಾಡಿ ಸ್ವಾಗತಿಸಿ ಕಾರ್ಯದರ್ಶಿ ವಿನಯ ಆಚಾರ್ ಹೊಸಬೆಟ್ಟು ವಂದಿಸಿದರು.