ಪುತ್ತೂರು: :ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ಸಂಸ್ಥೆ ತನ್ನ ನವೀಕೃತ, ನೂತನ ಹಾಗೂ ವಿಸ್ತೃತ ಆಭರಣ ಮಳಿಗೆಯ ಅನಾವರಣ ಪ್ರಯುಕ್ತ ಏಪ್ರಿಲ್ 20 ರಿಂದ ಸಾರ್ವಜನಿಕರಿಗೆ ಉಪಯುಕ್ತವಾಗುವ ಹಲವಾರು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಅದರ ಭಾಗವಾಗಿ ಮಂಗಳವಾರ ಪುತ್ತೂರು ಮುಳಿಯದಲ್ಲಿ ಲಲಿತಾ ಸಹಸ್ರನಾಮ ಪಠಣದೊಂದಿಗೆ ಮಹಿಳೆಯರಿಂದ ಕುಂಕುಮಾರ್ಚನೆಯ ಪುಣ್ಯ ಕಾರ್ಯಕ್ರಮ ನಡೆಯಿತು.

ವೇದಮೂರ್ತಿ ಉದಯ ಭಟ್ ಅವರ ವೇದಪಾರಂಗತದೊಂದಿಗೆ ನೆರವೇರಿತು. ಸತತವಾಗಿ 3 ವರ್ಷಗಳಿಂದ ಮಾತಾಭಗಿನಿಯರಿಗೆ ಲಲಿತಾ ಸಹಸ್ರನಾಮ ಹೇಳಿಕೊಟ್ಟ ನೆಲೆಯಲ್ಲಿ ವೇದಮೂರ್ತಿ ಉದಯ್ ಭಟ್ ಅವರನ್ನು ಗೌರವಿಸಲಾಯಿತು . ಸಂಸ್ಥೆಯ ಸಿ ಎಂ. ಡಿ ಕೇಶವ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, ಕುಂಕುಮಾರ್ಚನೆಯಲ್ಲಿ ಪಾಲ್ಗೊಂಡ ಎಲ್ಲಾ ಮಹಿಳೆಯರಿಗೆ ‘ಕುಂಕುಮ ಮಹತಿ ’ ಎಂಬ ಶ್ರೇಷ್ಠ ಕಿರುಹೊತ್ತಗೆಯನ್ನು ಕಿರು ಉಡುಗೊರೆಯಾಗಿ ನೀಡಿದರು. ನವ ವಿನ್ಯಾಸದ ಸ್ವರ್ಣ ಲೇಪಿತ ಬೆಳ್ಳಿಯ ಕುಂಕುಮ ಕರಡಿಗೆಯನ್ನು ಹಿರಿಯ ಮಹಿಳೆಯರಿಂದ ಅನಾವರಣಗೊಳಿಸಲಾಯಿತು. ಕಾರ್ಯಕ್ರಮದ ಉಸ್ತುವಾರಿ ಸಂಸ್ಥೆಯ ನಿರ್ದೇಶಕಿ ಕೃಷ್ಣವೇಣಿ ಪ್ರಸಾದ್ ಮುಳಿಯ ಕಾರ್ಯಕ್ರಮ ನಿರ್ವಹಿಸಿದರು.
ಸಂಸ್ಥೆಯ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಸಹಕಾರವನ್ನು ನೀಡಿದರು.