ಕಾರ್ಕಳ : ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಭಾರತೀಯ ವಾಯುಪಡೆಗಳು ಕಳೆದ ತಡರಾತ್ರಿ ನಡೆಸಿದ ಏರ್ ಸ್ಟ್ರೈಕ್ ಪಾಕ್ ಪ್ರೇರಿತ ಉಗ್ರ ಚಟುವಟಿಕೆಗೆ ನೀಡಿದ ದಿಟ್ಟ ಪ್ರತಿಕಾರ.
ಈ ದಾಳಿಯಲ್ಲಿ ನೂರಾರು ಉಗ್ರರು ಹತರಾಗಿದ್ದು ಭಾರತದ ಜತೆಗೆ ಪಾಕಿಸ್ತಾನ ಇನ್ನೆಂದು ಕುಚೋದ್ಯ ನೀಡದಂತ ಪೆಟ್ಟು ನೀಡಲಿ ಎಂದು ಆಶಿಸುತ್ತೇನೆ.
ದೇಶ ಈಗ ಯುದ್ಧದಂಥ ಸ್ಥಿತಿಯನ್ನು ಎದುರಿಸುತ್ತಿದ್ದು ದೇಶದೊಳಗೂ ಕೆಲ ವಿಚ್ಛಿದ್ರಕಾರಿ ಮನಸುಗಳು ವಿಷಕಕ್ಕುವ ಕೆಲಸ ಮಾಡಬಹುದು. ಇವರ ಬಗ್ಗೆ ಜಾಗೃತರಾಗಿರುತ್ತಾ, ಕೇಂದ್ರ ಸರ್ಕಾರ ನೀಡುವ ಭದ್ರತಾ ಸೂಚನೆಗಳನ್ನು ಪಾಲಿಸುತ್ತಾ ದೇಶದ ಭದ್ರತೆ ಹಾಗೂ ಸಾರ್ವಭೌಮತೆಯ ಜತೆಗೆ ಗಟ್ಟಿಯಾಗಿ ನಿಲ್ಲೋಣ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಹೇಳಿದರು.