ಆಪರೇಷನ್ ಸಿಂಧೂರ್ ಮಾಹಿತಿ ಹಂಚಿಕೊಂಡ ಸೇನೆ
ನವದೆಹಲಿ : ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರನ್ನು ಪಾಕಿಸ್ಥಾನದ ಒಳಗೆ ನುಗ್ಗಿ ಹೊಡೆದಿದ್ದೇವೆ, ಇದೇ ಮೊದಲ ಬಾರಿಗೆ ಪಾಕಿಸ್ಥಾನದ ಒಳಗೆ ನುಗ್ಗಿ ಲಷ್ಕರ್-ಎ-ತೊಯ್ಬಾ, ಹಿಜ್ಬುಲ್ಲಾದ ಪ್ರಮುಖ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಹಾಗೂ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಜಂಟಿ ಸುದ್ದಿಗೋಷ್ಠಿ ನಡೆಸಿ ಆಪರೇಷನ್ ಸಿಂಧೂರ್ ಕುರಿತು ಮಾಹಿತಿ ನೀಡಿದರು.
ಬುಧವಾರ ಬೆಳಗಿನ ಜಾವ 1.05ರಿಂದ 1.30ರವರೆಗೆ ಕಾರ್ಯಾಚರಣೆ ನಡೆಯಿತು. ಪಹಲ್ಗಾಮ್‌ನಲ್ಲಿ ಸಾವನ್ನಪ್ಪಿದ ಪ್ರವಾಸಿಗರಿಗಾಗಿ ಕಾರ್ಯಾಚರಣೆ ನಡೆಸಲಾಯಿತು. ಕಳೆದ 3 ದಶಕಗಳಿಂದ ಪಾಕಿಸ್ಥಾನದಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಲಾಗುತ್ತಿದೆ. ಪಾಕಿಸ್ಥಾನ ಮತ್ತು ಪಿಒಕೆಯಲ್ಲಿ 9 ಗುರಿಗಳನ್ನು ಗುರುತಿಸಿ ಅವುಗಳನ್ನು ನಾಶಪಡಿಸಿದ್ದೇವೆ. ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ.
ನಾವು ಪಾಕಿಸ್ಥಾನದ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ. ನಾಗರಿಕರಿಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ.
ಇದು 26/11ರ ನಂತರದ ಅತಿದೊಡ್ಡ ಘಟನೆಯಾಗಿದೆ. ಪಹಲ್ಗಾಮ್ ಒಂದು ಹೇಡಿತನದ ದಾಳಿಯಾಗಿದ್ದು, ಇದರಲ್ಲಿ ಜನರನ್ನು ಅವರ ಕುಟುಂಬಗಳ ಮುಂದೆಯೇ ಕೊಲ್ಲಲಾಯಿತು. ಜಮ್ಮು ಮತ್ತು ಕಾಶ್ಮೀರದ ಉತ್ತಮ ಸ್ಥಿತಿಯ ಮೇಲೆ ಪರಿಣಾಮ ಬೀರಲು ಈ ದಾಳಿಯನ್ನು ನಡೆಸಲಾಗಿದೆ. ಕಳೆದ ವರ್ಷ 2.25 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದರು.
ಪಾಕಿಸ್ಥಾನದ ಈ ನೆಲೆಗಳಲ್ಲಿ ಕುಳಿತು ಪಾಕಿಸ್ಥಾನ ಭಾರತದ ಮೇಲೆ ದಾಳಿ ಮಾಡಲು ಯೋಜನೆ ರೂಪಿಸುತ್ತಿತ್ತು ಹೀಗಾಗಿ, ಆ ದಾಳಿ ತಡೆಯಲು ಈ ಕಾರ್ಯಾಚರಣೆ ಅನಿವಾರ್ಯವಾಗಿತ್ತು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಹೇಳಿದರು.
ಭಾರತವು 7 ರಾಜ್ಯಗಳ 11 ವಿಮಾನ ನಿಲ್ದಾಣಗಳಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಶ್ರೀನಗರ, ಜಮ್ಮು, ಶ್ರೀನಗರ, ಲೇಹ್, ಚಂಡೀಗಢ, ಬಿಕಾನೇರ್, ಜೋಧ್‌ಪುರ, ರಾಜ್‌ಕೋಟ್, ಧರ್ಮಶಾಲಾ, ಅಮೃತಸರ, ಭುಜ್ ಮತ್ತು ಜಾಮ್‌ನಗರದಲ್ಲಿ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಈ ವಿಮಾನ ನಿಲ್ದಾಣಗಳು ಪಾಕಿಸ್ತಾನ ಗಡಿಯ ಪಕ್ಕದಲ್ಲಿವೆ.
ಎಲ್ಲೆಲ್ಲಿ ದಾಳಿ ನಡೆದಿದೆ?
ಮರ್ಕಜ್, ಸುಭಾನ್ ಅಲ್ಲಾ, ಬವಾಲ್ಪುರ್- ಜೈಷ್-ಎ- ಮೊಹಮ್ಮದ್
ಮರ್ಕಜ್ ತೈಬಾ-ಮುರೀದಕೆ-ನಷ್ಕರ್-ಎ-ತೊಯ್ಬಾ
ಸರ್ಜಲ್-ತೇರಾ ಕಲಾ-ಜೈಷ್-ಎ-ಮೊಹಮ್ಮದ್
ಮೆಹನೂನಾ ಜೋಯಾ-ಸಿಯಾಲ್ಕೋಟ್-ಹಿಜ್ಬುಲ್ ಮುಜಾಹಿದ್ದೀನ್
ಮರ್ಕಜ್ ಅಹಲೆ ಹದೀಮ್, ಬರ್ನಾಲಾ, ಲಷ್ಕರ್-ಎ-ತೊಯ್ಬಾ
ಮರ್ಕಜ್ ಅಬ್ಬಾಸ್, ಕೋಟಲಿ-ಜೈಷ್ಎ ಮೊಹಮ್ಮದ್
ಮಸ್ಕರ್ ರಹೀಲ್ ಶಾಹಿದ್, ಕೋಟಲಿ-ಜಿಜ್ಬುಲ್ ಮುಜಾಹಿದ್ದೀನ್
ಶಾವಯಿ ನಾಲಾ ಕ್ಯಾಂಪ್, ಮುಜಾಫರಾಬಾದ್, ಲಷ್ಕರ್ ಎ ತೊಯ್ಬಾ
ಸೇಯ್ದನಾ ಬಿಗಾಲ್ ಕ್ಯಾಂಪ್- ಮುಜಾಫರಾಬಾದ್-ಜೈಷ್ ಎ ಮೊಹಮ್ಮದ್