ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಕೆ.ವಿ.ಜಿ. ಅಮರ ಜ್ಯೋತಿ ಪ.ಪೂ. ಕಾಲೇಜು | ಎಸ್‍.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಕಾಲೇಜಿನಿಂದ ಸುವರ್ಣಕಾಶ | CET/NEET/JEE/CA Foundation ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ

ಸುಳ್ಯ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಸದಾ ಮಿಡಿಯುವ ಕೆ.ವಿ.ಜಿ. ಅಮರ ಜ್ಯೋತಿ ಪ.ಪೂ. ಕಾಲೇಜಿನಲ್ಲಿ ಇದೀಗ ಎಸ್‍.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೆ.ವಿ.ಜಿ. ಕಾಲೇಜಿನಿಂದ ಸುವರ್ಣಕಾಶವನ್ನಿತ್ತಿದೆ. CET/NEET/JEE/CA Foundation ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ ತರಬೇತಿ ನಡೆಯಲಿದೆ.  

ದಕ್ಷಿಣ ಕನ್ನಡ ಜಿಲ್ಲೆಯ ಮೀಸಲು ಕ್ಷೇತ್ರವೆನಿಸಿಕೊಂಡಿರುವ ಸುಳ್ಯ ತಾಲೂಕು ಇದೀಗ ಶಿಕ್ಷಣ ಬ್ರಹ್ಮ ದಿವಂಗತ ಡಾ. ಕುರುಂಜಿ ವೆಂಕಟರಮಣ ಗೌಡರ ದೂರಗಾಮಿ ಚಿಂತನೆಯ ಫಲವಾಗಿ ಭಾರತದ ಭೂಪಟದಲ್ಲಿ ವಿದ್ಯಾನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಹೆಮ್ಮೆಯ ವಿಚಾರ. ಬಹುಮುಖಿ ಶಿಕ್ಷಣದೊಂದಿಗೆ ಸುಳ್ಯ ತಾಲೂಕಿನ ಸಮಗ್ರ ಬೆಳವಣಿಗೆಗೆ ಕುರಂಜಿಯವರು ಹುಟ್ಟು ಹಾಕಿದ ಶಿಕ್ಷಣ ಸಂಸ್ಥೆಗಳೇ ಕಾರಣ ಎಂಬುದು ಸರ್ವಮಾನ್ಯ ಸತ್ಯ. 50 ವರ್ಷಗಳ ಹಿಂದೆ ಸುಳ್ಯವು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪದವಿ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಸಾಮಾಜಿಕ ಕಾರಣ ದೊಂದಿಗೆ ಸುಳ್ಯದಲ್ಲೇ ಪದವಿ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇತಿಹಾಸ ಮರುಕಳಿಸುತ್ತದೆ ಎಂಬ ಮಾತಿನಂತೆ ದಿ. ಡಾ. ಕುರುಂಜಿ ವೆಂಕಟ್ರಮಣಗೌಡರ ಸುಪುತ್ರ ಡಾ. ರೇಣುಕಾ ಪ್ರಸಾದ್ ರವರು 2016 ರಲ್ಲಿ ಸುಳ್ಯದಲ್ಲಿ ಕೆ.ವಿ.ಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜನ್ನು ಇದೇ ಧೈಯದೊಂದಿಗೆ ಪ್ರಾರಂಭಿಸಿದರು.

ಸುಳ್ಯದ ಪ್ರತಿಭಾವಂತ ವಿದ್ಯಾರ್ಥಿಗಳು ಪಿಯು ಶಿಕ್ಷಣಕ್ಕಾಗಿ ಅದರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗಾಗಿ ಪುತ್ತೂರು ಮಂಗಳೂರಿಗೆ ಹೋಗುವ ಅನಿವಾರ್ಯತೆ ಇತ್ತು. ಹೆಚ್ಚಿನ ಆರ್ಥಿಕ ಹೊರೆ ಶ್ರಮದಿಂದಾಗಿ ಉನ್ನತ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಈ ಭಾಗದ ವಿದ್ಯಾರ್ಥಿಗಳಿಗೆ ಗಗನಕುಸುಮ ಎಂದೆನಿಸಿತ್ತು. 2016 ರ ಜೂನ್ 6 ರಂದು ಕೆವಿಜಿ ಅಮರ ಜ್ಯೋತಿಪದವಿಪೂರ್ವ ಕಾಲೇಜು ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ಇದರ ಆಶ್ರಯದಲ್ಲಿ ಸಂಯೋಜಿತ ಪದವಿಪೂರ್ವ ಕಾಲೇಜಾಗಿ ಪ್ರಾರಂಭವಾಯಿತು. ಕೈಗೆ ಎಟಕುವ ಶುಲ್ಕದೊಂದಿಗೆ ಪ್ರಸ್ತುತ ಉನ್ನತ ಶಿಕ್ಷಣಕ್ಕಾಗಿ ಬೇಕಾದಂತಹ ಪೂರ್ವಭಾವಿ ತರಬೇತಿ CET/NEET/JEE/CA Foundation ಇತ್ಯಾದಿ ತರಗತಿಗಳೊಂದಿಗೆ ಪದವಿಪೂರ್ವ ಶಿಕ್ಷಣ ನೀಡುವ ವ್ಯವಸ್ಥೆಯೊಂದಿಗೆ ಕಳೆದ 9 ವರ್ಷಗಳಿಂದ ಕೆವಿಜಿ ಅಮರ ಜ್ಯೋತಿ ಪಿ.ಯು ಕಾಲೇಜು ಸಾಗಿ ಬರುತ್ತಿದೆ. ಸತತ ನೂರು ಶೇಕಡ ಫಲಿತಾಂಶದೊಂದಿಗೆ ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉಚಿತ ವೈದ್ಯಕೀಯ ಹಾಗೂ ತಾಂತ್ರಿಕ ಶಿಕ್ಷಣ ಪ್ರವೇಶಾತಿ ಪಡೆದುಕೊಂಡಿರುವುದು ಅಮರ ಜ್ಯೋತಿ ಪಿಯು ಕಾಲೇಜಿನ ವಿಶಿಷ್ಟ ಸಾಧನೆ.

















































 
 

ಅತ್ಯಾಧುನಿಕ ವ್ಯವಸ್ಥೆಯಲ್ಲಿ ಅತ್ಯುತ್ತಮ ಗುಣಮಟ್ಟದ ಮೌಲ್ಯಯುತ ಬೋಧನೆಯೊಂದಿಗೆ ವಿದ್ಯಾರ್ಥಿಗಳಿಗೆ JEE/NEET/CET /CA Foundation ವಿದ್ಯಾರ್ಥಿಗಳಿಗೆ ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುತ್ತದೆ. ಇಗಾಗಲೇ ತಮ್ಮ ಉನ್ನತ ಶಿಕ್ಷಣ ಮುಗಿಸಿ ದೇಶವಿದೇಶಗಳಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡ ಸಾಧಕ ಹಿರಿಯ ವಿದ್ಯಾರ್ಥಿಗಳನ್ನು ಹೊಂದಿದ ಹೆಮ್ಮೆ ಅಮರ ಜ್ಯೋತಿ ಪಿ.ಯು ಕಾಲೇಜಿನದ್ದು.

ಹಿರಿಯ ಪ್ರಾಂಶುಪಾಲರಾದ ಡಾ. ಯಶೋಧ ರಾಮಚಂದ್ರ ಅವರ ನೇತೃತ್ವದಲ್ಲಿ ಅನುಭವಿ ಶಿಕ್ಷಕರು ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ವಿದ್ಯಾರ್ಥಿ ಸಮೂಹ ತಮ್ಮ ಶೈಕ್ಷಣಿಕ ಸಾಧನೆಯುತ್ತ ಸಾಗುವಂತೆ ನಿರಂತರ ವಾಗಿ ಶ್ರಮಿಸುತ್ತಿದ್ದಾರೆ. ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ನೀಡಿ ಅವರ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗುವಲ್ಲಿ ಕಾಲೇಜಿನ ಆಡಳಿತ ಮಂಡಳಿ ನಿರಂತರವಾಗಿ ಶ್ರಮಿಸುತ್ತಿದೆ. ಹಾಗೂ ತನ್ನ ಸಾಮಾಜಿಕ ಬದ್ಧತೆ ಯನ್ನು ನಿರೂಪಿಸಿದೆ. ಕೆ.ವಿ.ಜಿ ಚಾರಿಟೇಬಲ್ ಟ್ರಸ್ಟ್ ಇದರ ಆಡಳಿತ ಮುಖ್ಯಸ್ಥರಾದ ಡಾ. ರೇಣುಕ ಪ್ರಸಾದ್ ವಿ ನಿರ್ದೇಶಕರಾದ ಡಾಕ್ಟರ್ ಜ್ಯೋತಿ ಆರ್ ಪ್ರಸಾದ್ ಮತ್ತು ಶ್ರೀ ಮೌರ್ಯ ಆರ್ ಕುರುಂಜಿ ಮಾರ್ಗದರ್ಶಕರಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ ಯು ಜೆ ಇವರೆಲ್ಲರ ಅಹರ್ನಿಷಿ ಪ್ರೋತ್ಸಾಹ ಮಾರ್ಗದರ್ಶನದೊಂದಿಗೆ ಕೆ.ವಿ.ಜಿ ಅಮರ ಜ್ಯೋತಿ ಪದವಿ ಪೂರ್ವ ಕಾಲೇಜು, ಸುಳ್ಯ ಶಿಕ್ಷಣ ಕ್ಷೇತ್ರದಲ್ಲಿ ದೃಢ ಹೆಜ್ಜೆಗಳನ್ನು ಇಟ್ಟು ಸಾಗುತ್ತಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಭದ್ರ ಬುನಾದಿಯನ್ನು ಒದಗಿಸುವಲ್ಲಿ ಸಂಪೂರ್ಣ ಬದ್ಧತೆಯಿಂದ ದುಡಿಯುತ್ತಿರುವ ಕೆವಿಜಿ ಅಮರ ಜ್ಯೋತಿ ಪಿಯು ಕಾಲೇಜು ವಿದ್ಯಾರ್ಥಿಗಳ ಉತ್ತಮ ಆಯ್ಕೆಯಾಗಲಿ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top