ಆಂಧ್ರಪ್ರದೇಶದ ಕುಪ್ಪಮ್ ದ್ರಾವಿಡಿಯನ್ ವಿಶ್ವವಿದ್ಯಾಲಯದ ಆಂಗ್ಲ ಭಾಷಾ ವಿಭಾಗಕ್ಕೆ ಕುಂದಾಪುರದ ಭಂಡಾರಕಾರ್ಸ್ ಪದವಿ ಕಾಲೇಜಿನ ಆಂಗ್ಲ ಭಾಷಾ ಅಸೋಸಿಯೇಟ್ ಪ್ರೊಪೆಸರ್ ಮೋತಿಬಾಯಿ ಕೆ. ಎಸ್. ರವರಿಗೆ ಡಾಕ್ಟರೇಟ್ ಗೌರವ ಲಭಿಸಿದೆ.
ಉಡುಪಿ ಎಂ. ಜಿ. ಎಂ ಕಾಲೇಜಿನ ಆಂಗ್ಲ ಭಾಷಾ ಪ್ರೊಪೆಸರ್ ಡಾ! ಶ್ರೀನಿವಾಸ್ ಅವರ ಮಾರ್ಗದರ್ಶನ ದಲ್ಲಿ “” The treatment of women characters in the selected plays of Dr Girish kaarnad “( ಗಿರೀಶ ಕಾರ್ನಾಡ್ ರ ಆಯ್ದ ನಾಟಕಗಳಲ್ಲಿ ರುವ ಮಹಿಳಾ ಪಾತ್ರಗಳ ವಿಶ್ಲೇಷಣೆ ) ಎಂಬ ವಿಷಯದಲ್ಲಿ ಮಂಡಿಸಿದ ಪ್ರಬಂಧಕ್ಕೆ ಪಿ. ಎಚ್. ಡಿ ಪದವಿ ನೀಡಿ ಗೌರವಿಸಲಾಗಿದೆ.
ಪುತ್ತೂರು ಕೃಷ್ಣ ನಗರದ ನಿವಾಸಿಯಾಗಿರುವ ಇವರು ಬನ್ನೂರಿನ ಎ. ವಿ. ಜಿ ಆಂಗ್ಲ ಮಾಧ್ಯಮ ಸಂಸ್ಥೆಯ ಆಡಳಿತಾಧಿಕಾರಿ, ಕಲಾವಿದ ಗುಡ್ಡಪ್ಪ ಬಲ್ಯ ಇವರ ಪತ್ನಿಯಾಗಿದ್ದಾರೆ.