ಪುತ್ತೂರು: ಇಲ್ಲಿನ ತೆಂಕಿಲ ಕನ್ನೂರು ನಿವಾಸಿ ವೆಂಕಪ್ಪ (58) ಎಂಬವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವೆಂಕಪ್ಪ ಅವರು ಮೇ 1ರಂದು ಮನೆಯಿಂದ ಪೇಟೆಗೆ ಹೋಗಿ ಬರುತ್ತೇನೆಂದು ಹೋದವರು ಮನೆಗೆ ಹಿಂದಿರುಗಿಲ್ಲ. ಮೇ 2ರಂದು ಅವರು ದರ್ಬೆ ಮಂಗಳ ಬಾರ್ ಬಳಿಯ ಮೈದಾನದಲ್ಲಿ ಮಲಗಿಕೊಂಡಿದ್ದ ಸ್ಥಿತಿಯಲ್ಲಿದ್ದರು. ಮಾಹಿತಿ ತಿಳಿದು ಮನೆಯವರು ಹೋಗಿ ನೋಡುವಾಗ ಮೃತಪಟ್ಟಿರುವುದು ಗೊತ್ತಾಗಿದೆ. ಮಲಗಿದ್ದ ಪಕ್ಕದಲ್ಲೇ ನೀರಿನ ಬಾಟಲಿಗೆ ನೇರಳೆ ಬಣ್ಣದ ಹುಡಿಯನ್ನು ಹಾಕಿದ್ದುದು ಬೆಳಕಿಗೆ ಬಂದಿದೆ.
ಅವರು ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಹೋದರಿ ಸುಮಾವತಿ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದಾರೆ.