ಕಾಣಿಯೂರು : ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿ(ರಿ) ಕಾಣಿಯೂರು ಸುವರ್ಣ ಸಂಭ್ರಮದ ವತಿಯಿಂದ 49ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ನರಸಿಂಹ ಜಯಂತಿ, ವಿಶೇಷ ಪೂಜೆ ಮೇ.11 ಭಾನುವಾರದಂದು ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಮೇ. 6 ಮಂಗಳವಾರದಿಂದ ಪ್ರತಿದಿನ ಸಂಜೆ 6ಗಂಟೆಯಿಂದ 9ಗಂಟೆಯವರೆಗೆ ಆಹ್ವಾನಿತ ಭಜನಾ ತಂಡಗಳಿಂದ ಸುವರ್ಣ ಸಂಭ್ರಮದ ಪ್ರಯುಕ್ತ ವಿಶೇಷ ಭಜನಾ ಸೇವೆ, ಶ್ರೀ ರಾಮತೀರ್ಥ ಕಾಣಿಯೂರು ಮಠದ ವ್ಯವಸ್ಥಾಪಕರಾದ ಶ್ರೀನಿಧಿ ಆಚಾರ್ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ.
ಮೇ.11 ಭಾನುವಾರ ಬೆಳಗ್ಗೆ 9:30 ರ ಸಮಯ ಶ್ರೀ ಸತ್ಯನಾರಾಯಣ ಪೂಜೆ ಪ್ರಾರಂಭವಾಗಲಿದ್ದು, ಪೂಜೆಯನ್ನು ಅರ್ಚಕರಾದ ಪದ್ಮನಾಭ ಭಟ್ ಕಟ್ಟತ್ತಾರು ನೆರವೇರಿಸಲಿದ್ದಾರೆ. ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 1ಗಂಟೆಯಿಂದ 1:45ರವರೆಗೆ ಶ್ರೀ ಸದಾಶಿವ ಮಕ್ಕಳ ಕುಣಿತ ಭಜನಾ ತಂಡ ಅಗಳಿ, 1:45 ರಿಂದ 2:30 ರವರೆಗೆ ಧರ್ಮಶ್ರೀ ಮಕ್ಕಳ ಕುಣಿತಾ ಭಜನಾ ತಂಡ ಕಲ್ಪಡ, ಮೂವಪ್ಪೆ, 2:30ರಿಂದ 3:15 ರವರೆಗೆ ಶ್ರೀ ಅಮ್ಮನವರು ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡ ಕಾಣಿಯೂರು, 3:15 ರಿಂದ 4:00ರವರೆಗೆ ಶ್ರೀ ಲಕ್ಷ್ಮೀನರಸಿಂಹ ಮಹಿಳಾ ಮತ್ತು ಮಕ್ಕಳ ಕುಣಿತ ಭಜನಾ ತಂಡ ಕಾಣಿಯೂರು, 4ರಿಂದ 4:45ರವರೆಗೆ ಶ್ರೀ ಸದಾನಂದ ಆಚಾರ್ಯ ಕಾಣಿಯೂರು ತರಬೇತಿಗೊಳಿಸಿದ ಭಜನಾ ತಂಡಗಳಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ 5ಗಂಟೆಯಿಂದ 6 ಗಂಟೆಯವರೆಗೆ ಶ್ರೀ ಕೃಷ್ಣ ಕಲಾಕೇಂದ್ರ (ರಿ) ವೀರಮಂಗಲ, ಕಾಣಿಯೂರಿನ ವಿದ್ಯಾರ್ಥಿಗಳಿಂದ ನೃತ್ಯಾರ್ಚನೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಮತ್ತು ಅಭಿನಂದನಾ ಕಾರ್ಯಕ್ರಮ ಅನ್ನಸಂತರ್ಪಣೆ ಜರುಗಲಿದೆ. ರಾತ್ರಿ 8 ಗಂಟೆಯಿಂದ ಶ್ರೀ ಕೃಷ್ಣ ಕಲಾಕೇಂದ್ರ (ರಿ) ವೀರಮಂಗಲ, ಕಾಣಿಯೂರು ಇಲ್ಲಿನ ವಿದ್ಯಾರ್ಥಿಗಳಿಂದ ಭಕ್ತಿಪ್ರಧಾನ ಭಸ್ಮಾಸುರ ಮೋಹಿನಿ, ಮಕರಜ್ಯೋತಿ ನೃತ್ಯ ರೂಪಕ ನಡೆಯಲಿದೆ. ಬಳಿಕ ಕಣ್ವರ್ಷಿ ಕಲಾಸುಮ ತಂಡ ಕಾಣಿಯೂರು ಇವರಿಂದ ರಾಮಾಯಣ ನೃತ್ಯರೂಪಕ ನೆರವೇರಲಿದೆ.
ಮೇ.11 ರಂದು ನಡೆಯುವ ಸತ್ಯನಾರಯಣ ಪೂಜೆಗೆ ಊರಿನ ಭಕ್ತರು ಬಾಗವಹಿಸಿ, ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.