ವಿಟ್ಲ: ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ವಿಶ್ವ ಹಿಂದೂ ಪರಿಷದ್ ನೀಡಿ ಬಂದ್ ಕರೆಗೆ ವಿಟ್ಲ, ಮಾಣಿ ಸೂರಿಕುಮೇರು ನೇರಳಕಟ್ಟೆ ಸಹಿತವ ಹೋಬಳಿ ವ್ಯಾಪ್ತಿಯಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬೆಳಿಗ್ಗೆ ವಿಟ್ಲ ದಲ್ಲಿ ಕೇರಳ ರಾಜ್ಯದ ಮತ್ತು ಕರ್ನಾಟಕದ ಕೆಎಸ್ ಆರ್ ಟಿ ಸಿ ಬಸ್ ಗಳ ಸಂಚಾರ ಮಾಡಿತ್ತು. ಬಳಿಕ ಸಂಚಾರ ಸಂಚಾರ ಸ್ಥಗಿತಗೊಳಿಸಿದೆ. ಖಾಸಗಿ ಬಸ್ ಗಳು ಬೆಳಿಗ್ಗೆನಿಂದಲೇ ರಸ್ತೆಗೆ ಇಳಿಯಲಿಲ್ಲ.
ತುರ್ತು ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ಹಾಲಿನ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟು ಬೆಳಗ್ಗಿನಿಂದಲೇ ಬಂದ್ ಆಗಿವೆ. ವಿಟ್ಲ ಪೊಲೀಸರು ಅಲ್ಲಲ್ಲಿ ನಾಕಾಬಂಧಿ ಹಾಕಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.