ನನ್ನ ಮಗ ಹಿಂದುತ್ವವನ್ನೇ ಉಸಿರಾಗಿಸಿಕೊಂಡು ಹಿಂದೂಗಳನ್ನು ಒಗ್ಗೂಡಿಸಿದ್ದ. ಸದಾ ಹಿಂದುತ್ವವೇ ನನ್ನ ಉಸಿರು ಎನ್ನುತ್ತಿದ್ದವನ ಉಸಿರನ್ನೇ ಕಸಿದರು ಎಂದು ಹತ್ಯೆಯಾದ ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಹೇಳಿದ್ದಾರೆ.
ನಿನ್ನೆ ನಾವೆಲ್ಲರೂ ಒಂದು ಮದುವೆ ಕಾರ್ಯಕ್ರಮದಲ್ಲಿ ಇದ್ದವು. ಇಲ್ಲದಿದ್ದರೆ ಪ್ರತಿದಿನದಂತೆ ನಿನ್ನೆಯೂ ಆತನಿಗೆ ಕರೆ ಮಾಡಬೇಕಿತ್ತು. ನಿನ್ನೆ ಮದುವೆ ಕೆಲಸದಲ್ಲಿ ಅವನಿಗೆ ಕರೆ ಮಾಡಲಾಗಲಿಲ್ಲ ಎಂದು ಅವರು ಹೇಳುತ್ತಾರೆ.
ಆರೋಪಿಗಳು ಯಾರೇ ಆಗಿರಲಿ ಅವರಿಗೆ ತಕ್ಕ ಶಿಕ್ಷೆಯಾಗಿಬೇಕು, ಇನ್ನೊಮ್ಮೆ ಇಂಥಾ ಘಟನೆಗಳು ನಡೆಯಬಾರದು ಎಂದು ಸುಹಾಸ್ ಶೆಟ್ಟಿ ತಾಯಿ ಹೇಳಿದ್ದಾರೆ.