ಪುತ್ತೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ವಿಶ್ವ ಹಿಂದೂ ಪರಿಷದ್ ಕರೆ ನೀಡಿದ ಬಂದ್ ಗೆ ಪುತ್ತೂರಿನಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.
ಬಂದ್ ಕರೆ ನೀಡಿದ ಬೆನ್ನಲ್ಲೇ ಪುತ್ತೂರಿನ ಎಲ್ಲಾ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದಾರೆ. ನ್ಯೂಸ್ ಪೇಪರ್ ಏಜೆನ್ಸಿ,ಹಾಲು, ಮೆಡಿಕಲ್, ಆಸ್ಪತ್ರೆ ಇನ್ನಿತರ ಪ್ರಮುಖ ಅಂಗಡಿಗಳು ತೆರೆದಿದ್ದವು. ಕೆಲವೆಡೆ ಹೊಟೇಲ್ ಗಳು ಅರ್ಧ ತೆರೆದಿದ್ದಿರುವುದು ಕಂಡು ಬಂದಿದೆ.
ಆಟೋ, ಕಾರು ಮುಂತಾದ ಖಾಸಗಿ ವಾಹನಗಳ ಓಡಾಟ ನಡೆಸುತ್ತಿದ್ದವು.