ಪುತ್ತೂರು: ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ವಿಶ್ವ ಹಿಂದೂ ಪರಿಷದ್ ಬಂದ್ ಗೆ ಕರೆ ನೀಡಿದರೂ ಶುಕ್ರವಾರ ಪುತ್ತೂರಿನಲ್ಲಿ ಕೆಲವು ಅಂಗಡಿಗಳು ಬಂದ್ ಮಾಡದ ಕಾರಣ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಪರ ಸಂಘಟನೆಗಳು, ಪುತ್ತೂರು ಬಸ್ ನಿಲ್ದಾಣ ಬಳಿ ಜಮಾಯಿಸಿದ ಘಟನೆ ನಡೆದಿದೆ.
11 ಗಂಟೆ ಸುಮಾರಿಗೆ ಅರುಣ್ ಕುಮಾರ್ ಪುತ್ತಿಲ ಅವರು ಪೊಲೀಸರ ಜೊತೆ ಮಾತನಾಡಿ, ಅಂಗಡಿಗಳನ್ನು ಬಂದ್ ಮಾಡಿಸಿ, ಹಾಗೊಂದು ವೇಳೆ ಬಂದ್ ಮಾಡದೇ ಇದ್ದರೆ ಸವಾಲು ಎದುರಿಸಲು ಸಿದ್ಧ ಎಂದರು.
ಮುರಳೀಕೃಷ್ಣ ಹಸಂತ್ತಡ್ಕ ಮಾತನಾಡಿ, ನಾವು ಇಲ್ಲೇ ಕುಳೀತುಕೊಳ್ಳಲು ಸಿದ್ಧ ಎಂದರು.
ಬಳಿಕ ಬಸ್ ನಿಲ್ದಾಣ ಕಟ್ಟಡದ ಒಂದೊಂದು ಅಂಗಡಿಗಳು ಬಂದ್ ಮಾಡಲು ಶುರು ಮಾಡಿದವು. ಅಲ್ಲಿವರೆಗೂ ಹಿಂದೂ ಕಾರ್ಯಕರ್ತರು, ಮುಖಂಡರು ಸ್ಥಳದಲ್ಲೇ ಜಮಾಯಿಸಿದ್ದರು.