ನಮ್ಮ ಕಾರ್ಯಕರ್ತ ಸುಹಾಸ್ ಶೆಟ್ಟಿಯವರ ಭೀಕರ ಸಾರ್ವಜನಿಕ ಹತ್ಯೆಯು ಮತ್ತೊಮ್ಮೆ ಕರಾವಳಿಗರ ಹೃದಯದಲ್ಲಿ ಮನಸ್ಸಿನಲ್ಲಿ ಅಳಿಸಲಾಗದ ಆಘಾತ ಸೃಷ್ಟಿಸಿದೆ. ಇಂತಹ ನೋವು ಮೊದಲನೆಯದಲ್ಲ, ಹೊಸತೂ ಅಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ನಮ್ಮ ಭಾಗದ ಹಿಂದೂ ಕಾರ್ಯಕರ್ತರ ಗುರಿಯಾಗಿ ಹತ್ಯೆಗಳ ಪ್ರವೃತ್ತಿ ಹೆಚ್ಚಾಗುತ್ತವೆ ಎಂದು ಸಂಸದ ಬ್ರಿಜೇಶ್ ಚೌಟ ಹೇಳಿದರು.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಅವರನ್ನು ಗುರಿ ಇಟ್ಟು ನಡೆಸಿದ ಹತ್ಯೆಯ ರೀತಿಯಲ್ಲಿಯೇ ಈ ಘಟನೆಯು ನಡೆದಿದೆ. ಈ ರೀತಿಯ ಹತ್ಯೆಯು ಈ ಪ್ರದೇಶದಲ್ಲಿ ಪಿಎಫ್‌ಐ ನಂತಹ ಮೂಲಭೂತವಾದಿ ಸಂಘಟನೆಗಳು ಇನ್ನೂ ಸ್ವೀಪರ್ ಸೆಲ್‌ನಂತ ಜೀವಂತವಾಗಿರುವುದನ್ನು ಸ್ಪಷ್ಟ ಪಡಿಸುತ್ತದೆ
ಎಂದಿನಂತೆ ಹಿಂದೂ ಕಾರ್ಯಕರ್ತರ ಹತ್ಯೆಗಳನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂಬ ಮಾತನ್ನು ಮನಗೊಂಡು. ನಾನು ಗೌರವಾನ್ವಿತ ಗೃಹ ಸಚಿವರಾದ ಶ್ರೀ ಅಮಿತ್ ಶಾ ಜೀ ಅವರಲ್ಲಿ ಪ್ರಕರಣವನ್ನು ಈ ಎನ್‌ಐಎಗೆ ವರ್ಗಾಯಿಸಿ ಮಧ್ಯಪ್ರವೇಶಿಸುವಂತೆ ವಿನಂತಿಸಿದ್ದೇನೆ ಎಂದರು.
ನಮಗೆ ಸಂಪೂರ್ಣ, ರಾಜಿರಹಿತ, ನಿಷ್ಪಕ್ಷಪಾತವಾದ ತನಿಖೆಯ ಅಗತ್ಯವಿದ್ದು, ಇಲ್ಲಿ ನೀಡಲಾಗುವ ನ್ಯಾಯವು ಭಾರತ ಎಂದೆಂದಿಗೂ ಇಂತಹ ದುಷ್ಟ ಶಕ್ತಿಗಳನ್ನು ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಬೇಕು ಎಂದರು.