ಪುತ್ತೂರು: ರಾಜೀವ್ ಗಾಂಧಿ ಯೂನಿವರ್ಸಿಟಿ ಅಧೀನದಲ್ಲಿ ನಡೆದ ಆಯುರ್ವೇದ ಎಂ.ಡಿ.ಯ ಅಂತಿಮ ಪರೀಕ್ಷೆಯಲ್ಲಿ ಪುತ್ತೂರಿನ ಡಾ. ಮೇಘಶ್ರೀ 2. 676 ಅಂಕ ಪಡೆದು ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಭಾಗದಲ್ಲಿ 2 ನೇ ರ‍್ಯಾಂಕ್ ಪಡೆದಿರುತ್ತಾರೆ.
ಅವರು ಕುತ್ಪಾಡಿ ಎಸ್ಡಿಎಂ ಆಯುರ್ವೇದ ಮೆಡಿಕಲ್ ಕಾಲೇಜ್ ನಲ್ಲಿ ಎಂ.ಡಿ. ವ್ಯಾಸಂಗ ಮಾಡಿದ್ದು, ಪ್ರಸ್ತುತ ಬೆಳ್ತಂಗಡಿ ಪ್ರಸನ್ನ ಆಯುರ್ವೇದ ಕಾಲೇಜ್ ಬೆಳ್ತಂಗಡಿ ಇಲ್ಲಿ ವೈದ್ಯಕೀಯ ವಿಭಾಗದ ಪ್ರಸೂತಿ ತಂತ್ರ ಮತ್ತು ಸ್ತ್ರೀ ರೋಗ ವಿಷಯದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅವರು ಸುಶೀಲಾ ಕೆ. ಹಾಗೂ ಸಾರಿಗೆ ಇಲಾಖೆಯ ನಿವೃತ್ತ ಉದ್ಯೋಗಿ ಪುರುಷೋತ್ತಮ ಬಿ. ಅವರ ಪುತ್ರಿ, ಪುತ್ತೂರಿನ ಸುದಾನ ಪದವಿ ಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ಸುಪ್ರೀತ್ ಕೆ.ಸಿ ಅವರ ಪತ್ನಿ.