ಸುಳ್ಯ; ಪತಿಯ ತಿಥಿಯ ದಿನವೇ ಪತ್ನಿ ಅಸ್ವಸ್ಥಗೊಂಡು ನಿಧನ ಹೊಂದಿರುವ ಘಟನೆ ಕನಕಮಜಲಿನಲ್ಲಿ ನಡೆದಿದೆ.
ಕನಕಮಜಲು ಗ್ರಾಮದ ನೆಡಿಲು ಸೋಮಪ್ಪ ಗೌಡರು ಏ.17 ರಂದು ನಿಧನ ಹೊಂದಿದ್ದರು. ಹನ್ನೊಂದನೇ ದಿನದ ಕಾರ್ಯಕ್ರಮ ಏ. 28 ರಂದು ನಡೆಯುತ್ತಿತ್ತು. ಕಾರ್ಯಕ್ರಮ ನಡೆಯುತ್ತಿರುವಾಗಲೇ ಮಧ್ಯಾಹ್ನದ ವೇಳೆಗೆ ಪತ್ನಿ ಸುಬ್ಬಕ್ಕೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ, ಕೂಡಲೇ ಸುಳ್ಯ ಆಸ್ಪತ್ರೆಗೆ ಕರೆತಂದರೂ ಆ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.
ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.