ಚಲಿಸುತ್ತಿದ್ದ ಕಾರಿನಲ್ಲಿ ಯುವಕರಿಂದ ಅಪಾಯಕಾರಿ ಸ್ಟಂಟ್ : ಪ್ರಕರಣ ದಾಖಲು..!!

ಕಡಬ : ಚಲಿಸುತ್ತಿದ್ದ ಕಾರಿನಲ್ಲಿ ಬಾಗಿಲು ಹಾಗೂ  ಕಾರಿನ ಮೇಲ್ಬಾಗದಲ್ಲಿ ಕುಳಿತು ಹರಸಾಹಸವನ್ನು ಮಾಡುತ್ತಾ ಚಲಿಸುತ್ತಿದ್ದ ಇತರ ವಾಹನಗಳ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿ ಹುಚ್ಚಾಟ ಮೆರೆದ ಘಟನೆ ಎ. 27 ಭಾನುವಾರದಂದು ರಾತ್ರಿ ಕಡಬದಲ್ಲಿ ನಡೆದಿದೆ.

ಕಡಬ-ಉಪ್ಪಿನಂಗಡಿ ರಾಜ್ಯ ರಸ್ತೆಯಲ್ಲಿ ಕಡಬದಿಂದ ಅಲಂಕಾರು ತನಕ 15 ಕಿ.ಮೀ. ದೂರ ಹಲವು ಕಾರು ಮತ್ತು ದ್ವಿಚಕ್ರ ವಾಹನಗಳಲ್ಲಿ ಕರ್ಕಶವಾಗಿ ನಿರಂತರ ಹಾರ್ನ್ ಹಾಕುತ್ತಾ ಸಂಚಾರ ನಿಯಮವನ್ನು  ಉಲ್ಲಂಘಿಸಿ ವಾಹನ ಚಲಾಯಿಸಿರುವಂತಹ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿದೆ.

ಇದಕ್ಕೆ ಪೂರಕ ಎಂಬಂತೆ ಎರಡು ವೀಡಿಯೋ ತುಣುಕುಗಳು ಲಭ್ಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆಯಾಗಿದೆ. ಕಾರಿನಲ್ಲಿ ಅಪಾಯಕಾರಿ ರೀತಿಯಲ್ಲಿ ಕುಳಿತು ಹೋಗುತ್ತಿರುವುದು ಇದರಲ್ಲಿದೆ. ಈ ಘಟನೆ ಬಗ್ಗೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.









https://screenapp.io/app/#/shared/8P4BcrrHNx























 
 

ಇದೇ ರೀತಿ ಸುಳ್ಯದಲ್ಲಿ ಇತ್ತೀಚೆಗೆ ಕಾರಿನಲ್ಲಿ ಪುಂಡಾಟ ಮೆರೆದವರ ವಿರುದ್ಧ ಸುಳ್ಯ ಪೊಲೀಸರು ಸುಮೊಟೊ ಕೇಸು ದಾಖಲಿಸಿಕೊಂಡು ಬಳಿಕ ಆರೋಪಿಗಳನ್ನು ಬಂಧಿಸಿದ್ದರು. ಈ ಘಟನೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಕೇಳಿ ಬಂದಿದೆ. ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ದಿನಾಂಕ: 27-04-2025 ರಂದು ರಾತ್ರಿ ಕಡಬ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಡಬ ತಾಲೂಕು ಪೆರಾಬೆ ಗ್ರಾಮದ ಪರಿಸರದಲ್ಲಿನ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಪೆರಾಬೆ ಕಡೆಯಿಂದ ಅಲಂಕಾರು ಕಡೆಗೆ 3 ಕಾರುಗಳನ್ನು ಅದರ ಚಾಲಕರು ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯಲ್ಲಿ ಅಪಾಯಕಾರಿಯಾಗಿ ಚಾಲನೆ ಮಾಡಿಕೊಂಡು ತೆರಳುತ್ತಿರುವುದು ಹಾಗೂ ಸದ್ರಿ ಕಾರುಗಳಲ್ಲಿದ್ದ ಸಹ ಪ್ರಯಾಣಿಕರು ಅಪಾಯಕಾರಿಯಾಗಿ ಕಿಟಕಿಯಿಂದ ಹೊರಬಂದು ಬೊಬ್ಬೆ ಹಾಕುತ್ತಿರುವ ವಿಡಿಯೋ ಕಂಡುಬಂದಿರುತ್ತದೆ. ವಿಡಿಯೋವನ್ನು ಪರಿಶೀಲಿಸಲಾಗಿ ಸದ್ರಿ ಕಾರುಗಳ ಪೈಕಿ 02 ಕಾರುಗಳ ನೊಂದಣಿ ಸಂಖ್ಯೆ KA 19 ME 4400 ಹಾಗೂ KA 34 N 5909 ಆಗಿರುತ್ತದೆ. ಇನ್ನೊಂದು ಕಾರಿನ ನೋಂದಣಿ ಸಂಖ್ಯೆ ಅ. ಕ್ರ: 30/2025 00: 281, BNS-2023 184 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top