ಬೆಂಗಳೂರು : ಆಕರ್ಷಕ ಪಂದ್ಯವಾದ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RCB vs DC) ನಡುವಿನ ಕದನವು ನಿನ್ನೆ (ಏ.27) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಿತು. ರಜತ್ ಪಡೆ ಡೆಲ್ಲಿ ತಂಡವನ್ನು ಮಣಿಸುವ ಯತ್ನದಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಯಶಸ್ಸನ್ನು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 162 ರನ್ ಪಡೆದಿತ್ತು. ಈ ಗುರಿ ಬೆನ್ನಟ್ಟಿದ ಆರ್‌ಸಿಬಿ (RCB) ಕೇವಲ 4 ವಿಕೆಟ್ ಕಳೆದುಕೊಂಡು ಇನ್ನು 9 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಮೆಟ್ಟಿಲೇರಿತು. ಈ ಗೆಲುವಿನೊಂದಿಗೆ ಆರ್‌ಸಿಬಿ, ಡೆಲ್ಲಿ ವಿರುದ್ಧ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಂಡಿದಲ್ಲದೆ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಆರ್‌ಸಿಬಿ ಈಗ 10 ಪಂದ್ಯಗಳಿಂದ 14 ಅಂಕಗಳನ್ನು ಗಳಿಸಿದ್ದು, ಪ್ಲೇಆಫ್ ಅರ್ಹತೆಗೆ ಬಹಳ ಹತ್ತಿರದಲ್ಲಿದೆ.
ಈ ಬಾರಿಯ ಐಪಿಎಲ್ ನಲ್ಲಿ ಪ್ರತಿಯೊಂದು ತಂಡವೂ ತಲಾ 14 ಪಂದ್ಯಗಳನ್ನು ಆಡುತ್ತಿದೆ. ಅದರಲ್ಲಿ ಗುಜರಾತ್ ಜೈಂಟ್ಸ್ 8 ಪಂದ್ಯ ಆಡಿರುವುದನ್ನು ಹೊರತುಪಡಿಸಿದರೆ ಎಲ್ಲಾ ಪಂದ್ಯಗಳು 9 ಪಂದ್ಯಗಳನ್ನು ಅಡಿವೆ. ರಾಯಲ್ ಚಾಲೆಂಜರ್ಸ್, ಲಖನೌ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡ 10 ಪಂದ್ಯಗಳನ್ನು ಪೂರ್ಣಗೊಳಿಸಿವೆ. ಪ್ರಸ್ತುತ ಅಂಕಗಳ ಆಧಾರದಲ್ಲಿ ನೋಡುವುದಾದರೆ ನಿನ್ನೆ ನಡೆದ ಪಂದ್ಯದ ಗೆಲುವಿನ ಬಳಿಕ ಆರ್‌ಸಿಬಿ ಅಂಕಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್ ಅನ್ನು 2ನೇ ಸ್ಥಾನಕ್ಕೆ ಇಳಿಸಿ ಅಗ್ರಸ್ಥಾನದಲ್ಲಿದೆ.
ಆರ್ ಸಿಬಿಗೆ ಬಾಕಿ ಇರುವ ಪಂದ್ಯ :
ಮೇ 3ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ, ಮೇ 9ರಂದು ಲಖನೌ ಸೂಪರ್ ಜೈಂಟ್ಸ್, ಮೇ 13ರಂದು ನನ್ ರೈನರ್ಸ್ ಹೈದರಾಬಾದ್ ಮತ್ತು ಮೇ 17ರಂದು ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಆರ್ ಸಿಬಿ ಸೆಣೆಸಾಡಲಿದೆ. ಇದರಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಹೊರತುಪಡಿಸಿದರೆ ಉಳಿದ ಮೂರು ಪಂದ್ಯಗಳು ಸಹ ತವರು ಮೈದಾನವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.