ಪುತ್ತೂರು: ಬರಗಾಲ ಸಿದ್ಧನಾಥ ಆಶ್ರಮ ಬ್ರಹ್ಮಗಡ್ಡಿ ಮಠ, ಮುಸ್ಟೂರು, ಕಾರಟಗಿ ತಾ. ಕೊಪ್ಪಳ ಜಿಲ್ಲೆಯ ಶ್ರೀ ಮಾಧವಾನಂದ ಮಹಾರಾಜರು ಇಂದು ಬೆಳಿಗ್ಗೆ ಲಿಂಗೈಕ್ಯರಾಗಿದ್ದಾರೆ.
ಬಳ್ಪ ಗ್ರಾಮದ ಎಣ್ಣೆಮಜಲು ಮನೆಯವರಾಗಿದ್ದು, ಸುಮಾರು 45 ವರ್ಷಗಳ ಹಿಂದೆ ಕುಟುಂಬ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದರು. ಪ್ರಸ್ತುತ ಬರಗಾಲ ಸಿದ್ಧನಾಥ ಆಶ್ರಮ ಬ್ರಹ್ಮಗಡ್ಡಿ ಮಠ, ಮುಸ್ಟೂರು, ಕಾರಟಗಿ ತಾ. ಕೊಪ್ಪಳ ಜಿಲ್ಲೆ ಇಲ್ಲಿ ಸ್ವಾಮೀಜಿ ಯಾಗಿ, ಮಠದ ಮಹಾರಾಜರಾಗಿ ಸಾವಿರಾರು ಭಕ್ತರನ್ನು ಹೊಂದಿದ್ದರು.
ಅವರ ಅಂತ್ಯಕ್ರಿಯೆ ನಾಳೆ (ಏ.28) ಮಧ್ಯಾಹ್ನ 11.20 ಕ್ಕೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುನ್ಟೂರು, ಬ್ರಹ್ಮಗಡಿಮಠದ ಬರಗಾಲ ಸಿದ್ಧನಾಥ ಆಶ್ರಮದಲ್ಲಿ ನಡೆಯಲಿದೆ.