ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಡಾ.ಕೆ.ಕಸ್ತೂರಿ ರಂಗನ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ನಡೆಸಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಡಾ.ಕಸ್ತೂರಿ ರಂಗನ್ ನಿನ್ನೆ ಬೆಂಗಳೂರಿನಲ್ಲಿರುವ ಅವರ ನಿವಾಸದಲ್ಲಿ ನಿಧನರಾದರು. ಅವರ ಪಾರ್ಥೀವ ಶರೀರವನ್ನು ಇಂದು ಮಧ್ಯಾಹ್ನ 12 ರವರೆಗೆ ರಾಮನ್ ಸಂಶೋಧನಾ ಸಂಸ್ಥೆಯಲ್ಲಿ ಜನರ ಅಂತಿಮ ದರ್ಶನಕ್ಕಾಗಿ ಇರಿಸಲಾಗುವುದು ಎಂದು ಇಸ್ರೊ ತಿಳಿಸಿದೆ. ಡಾ. ಕಸ್ತೂರಿರಂಗನ್ ಅವರ ಹಿರಿಯ ಮಗ ಸಂಜಯ್ ರಂಜನ್ ಅಮೆರಿಕದಿಂದ ಹಿಂದಿರುಗಿದ ನಂತರ ಇಂದು ಅಪರಾಹ್ನ ಬಳಿಕ ಅಂತ್ಯಕ್ರಿಯೆಯನ್ನು ನಡೆಸಲಾಗುವುದು ಎಂದು ಅವರ ಕುಟುಂಬ ತಿಳಿಸಿದೆ.
ಬಾಹ್ಯಾಕಾಶ ವಿಜ್ಞಾನಿಯಾಗಿದ್ದರೂ ಕಸ್ತೂರಿ ರಂಗನ್ ಪಶ್ಚಿಮ ಗಟ್ಟ ವರದಿಯಿಂದಾಗಿ ಹೆಚ್ಚು ಪ್ರಸಿದ್ಧರಾಗಿದ್ದರು. ಮಾನವನ ಆಕ್ರಮಣದಿಂದ ಪಶ್ಚಿಮ ಘಟ್ಟಗಳನ್ನು ಉಳಿಸುವ ಸಲುವಾಗಿ ಅವರು ಅಧ್ಯಯನ ಮಾಡಿದ ವರದಿ ಕಸ್ತೂರಿ ರಂಗನ್ ವರದಿ ಎಂದೇ ಅರಿಯಲ್ಪಡುತ್ತದೆ. ಈ ವರದಿಯ ಆಧಾರದಲ್ಲೇ ಸರಕಾರ ಪಶ್ಚಿಮ ಘಟ್ಟದ ಉಳಿವಿಗೆ ಹಲವು ಕ್ರಮಗಳ:ನ್ನು ಕೈಗೊಂಡಿದೆ.