ಬಸ್‌ನಲ್ಲಿ ಯುವತಿಗೆ ಕಿರುಕುಳ ನೀಡಿದ ಕಂಡಕ್ಟರ್‌

ವೀಡಿಯೊ ವೈರಲ್‌ ಆದ ಬಳಿಕ ನಿರ್ವಾಹಕನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು

ಮಂಗಳೂರು: ಮುಡಿಪು -ಸ್ಟೇಟ್‌ ಬ್ಯಾಂಕ್‌ ಮಧ್ಯೆ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್‌ ನಿರ್ವಹಕ ಚಲಿಸುತ್ತಿರುವ ಬಸ್ಸಿನಲ್ಲೇ ಯುವತಿಗೆ ಕಿರುಕುಳ ನೀಡಿದ ಘಟನೆ ಸಂಭವಿಸಿದೆ. ನಿದ್ರಿಸುತ್ತಿದ್ದ ಯುವತಿಗೆ ನಿರ್ವಾಹಕ ಕಿರುಕುಳ ನೀಡಿದ್ದು, ಪ್ರಯಾಣಿಕರೊಬ್ಬರು ಇದನ್ನು ವೀಡಿಯೊ ಮಾಡಿದ್ದರು.

ಈ ವೀಡಿಯೊ ವೈರಲ್‌ ಆದ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸರು, ಆರೋಪಿ ನಿರ್ವಾಹಕ ಬಾಗಲಕೋಟೆ ಮೂಲದ ಪ್ರದೀಪ್‌ (40) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.





























 
 

ಏಪ್ರಿಲ್ 22ರಂದು ಮುಡಿಪುವಿನಿಂದ ಸ್ಟೇಟ್‌ ಬ್ಯಾಂಕ್​​ನತ್ತ ತೆರಳುತ್ತಿದ್ದ ಬಸ್​​ನಲ್ಲಿ ಯುವತಿ ನಿದ್ರೆಗೆ ಜಾರಿದ್ದರು. ಆ ಸಂದರ್ಭದಲ್ಲಿ ಕಂಡಕ್ಟರ್ ಆ ಯುವತಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ನಿರ್ವಾಹಕ ಈಶ್ವರ್‌ ಯುವತಿಯ ದೇಹವನ್ನು ಸ್ಪರ್ಶಿಸಲು ಮುಂದಾಗಿದ್ದಾನೆ. ಈ ಸಂದರ್ಭ ಪಕ್ಕದ ಸೀಟಿನಲ್ಲಿದ್ದ ಪ್ರಯಾಣಿಕರೊಬ್ಬರು ಇದನ್ನು ಸದ್ದಿಲ್ಲದೆ ವೀಡಿಯೊ ಮಾಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top