ಅಂಬುಲ ತರವಾಡು ಮನೆ ಇವರಿಂದ ನಾಗದೇವರ, ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠೆ ಕಾರ್ಯಕ್ರಮ ಏ, 20ರಿಂದ ಏ,23ರವರೆಗೆ ನಡೆಯಿತು.
ಏ.20 ಭಾನುವಾರ ಸಂಜೆ 6 ಗಂಟೆಗೆ ನಾಗನ ಕಟ್ಟೆಯಲ್ಲಿ ಪ್ರಾಸಾದ ಪರಿಗ್ರಹ, ಪ್ರಾರ್ಥನೆ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಬಿಂಬಾದಿ ವಾಸ ಕಾರ್ಯಕ್ರಮ ನೆರವೇರಿತು.

ಏ.21 ಸೋಮವಾರ ಬೆಳಗ್ಗೆ 7 ಗಂಟೆಗೆ ಶ್ರೀ ಮಹಾಗಣಪತಿ ಹೋಮ, ಕಲಶ ಪೂಜೆ, ಬೆಳಗ್ಗೆ 9:30ರ ಶುಭ ಮುಹೂರ್ತದಲ್ಲಿ ನಾಗಪ್ರತಿಷ್ಠೆ, ನಾಗರಕ್ತೇಶ್ವರಿ, ಬೈರವ, ಗುಳಿಗ ದೈವಗಳ ಪ್ರತಿಷ್ಠೆ , ಕಲಶಾಭಿಷೇಕ, ಆಶ್ಲೇಷ ತಂಬಿಲ ಹಾಗೂ ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

ಏ.22 ಮಂಗಳವಾರ ಸಂಜೆ 6 ಗಂಟೆಗೆ ಧರ್ಮದೈವ ಸಾನಿಧ್ಯದಲ್ಲಿ ಪ್ರಾಸಾದ ಪರಿಗ್ರಹಣ, ಪ್ರಾರ್ಥನೆ, ಸ್ಥಳಶುದ್ದಿ, ಪ್ರಾಸಾದ ಶುದ್ದಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಕ್ಬಾಲ ಬಿಂಬಾಧಿವಾಸ, ಅನ್ನಪ್ರಸಾದ ನಡೆಯಿತು.
ಏ.23 ಬುಧವಾರ ಸಂಜೆ 7 ಗಂಟೆಗೆ ಗಣಹೋಮ ಬೆಳಗ್ಗೆ 8:05 ಕ್ಕೆ ಧರ್ಮದೈವದ ಪ್ರತಿಷ್ಠೆ, ಗೃಹಪ್ರವೇಶ, ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರುಗಿತು.