ಪುತ್ತೂರು: ಕೋರ್ಟ್ ರಸ್ತೆಯಲ್ಲಿರುವ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಅಕ್ಷಯ ನದಿಗೆ ದಿನದಂದು ಜನ ಚಿನ್ನದ ಖರೀದಿ ಯಾಕೆ ಮಾಡುತ್ತಾರೆ. ಇದರ ಧಾರ್ಮಿಕ ಪರಂಪರೆ ಕಾರಣಗಳು ಎಂಬ ವಿಷಯದ ಕುರಿತು ವಿಚಾರ ಸಂಕಿರಣ ಏ.24 ಗುರುವಾರ ಸಂಜೆ 4 ಗಂಟೆಗೆ ನಡೆಯಲಿದೆ .
ಕಾರ್ಯಕ್ರಮದಲ್ಲಿ ಕುಂಟಾರು ರವೀಶ್ ತಂತ್ರಿಗಳು, ಪಂಜ ಭಾಸ್ಕರ ಭಟ್ , ವಂದನಾ ಶಂಕರ್ ತಮ್ಮ ವಿಚಾರಧಾರೆಗಳನ್ನು ಮಂಡಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ಟ ಭಾಗವಹಿಸಲಿದ್ದಾರೆ. ಸಂವಾದ ಕಾರ್ಯಕ್ರಮವನ್ನು ಡಾ ವಿಜಯ ಸರಸ್ವತಿ ನಡೆಸಿಕೊಡುವವರು.
ಚಿನ್ನದ ಹೂಡಿಕೆ , ಮೌಲ್ಯ ವೃದ್ಧಿ ಹಾಗೂ ಹಲವು ಧಾರ್ಮಿಕ ಮತ್ತು ವೈಚಾರಿಕ ವಿಷಯಗಳ ಕುರಿತು ವಿಚಾರ ವಿನಿಮಯ ನಡೆಯಲಿದೆ. ಆಸಕ್ತರು ಈ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಚೇರ್ಮನ್ ಕೃಷ್ಣ ಪ್ರಸಾದ್ ಮುಳಿಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.