ವೀರಮಂಗಲ : ಪಿಎಂಶ್ರೀ ವೀರಮಂಗಲ ಶಾಲೆಯಲ್ಲಿ ವಿಶ್ವ ಭೂದಿನ ಕಾರ್ಯಕ್ರಮ ನಡೆಯಿತು.
ದೇಶದ್ಯಾಂತ ಇಂದು ವಿಶ್ವ ಭೂದಿನವನ್ನಾಗಿ ಆಚರಿಸುತ್ತಿದ್ದು ಪರಿಸರ ಪ್ರೇಮದೊಂದಿಗೆ ಗಿಡಗಳ ಪರಿಚಯ, ಸ್ವಚ್ಛತೆ, ಕಸವಿಲೇವಾರಿ, ನೀರು ಇಂಗಿಸುವಿಕೆ ಇತ್ಯಾದಿ ಪರಿಸರ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸುವ ಅಂಗವಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ಪ್ರತಿ ಶಾಲೆಯಲ್ಲೂ ಇಕೋ ಕ್ಲಬ್ ಸ್ಥಾಪಿಸಲಾಗಿದ್ದು ಆ ಪ್ರಯುಕ್ತ ವಿಶ್ವ ಭೂದಿನವಾದ ಏ 22 ರಂದು ಗಿಡಗಳ ಪರಿಚಯ ಮಾಡಲು ಗಿಡಗಳಿಗೆ QR CODE ಕಟ್ಟುವುದರ ಮೂಲಕ ವೀರಮಂಗಲ ಪಿಎಂಶ್ರೀ ಶಾಲೆಯ ಇಕೋ ಮತ್ತು ಯೂತ್ ಕ್ಲಬ್ ನ ವಿದ್ಯಾರ್ಥಿಗಳು ಹಾಗೂ ಮುಖ್ಯಗುರು ತಾರಾನಾಥ ಪಿ ಇವರ ಮಾರ್ಗದರ್ಶನದಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮಕ್ಕೆ ಎಸ್ ಡಿ ಎಂ ಸಿ ಸದಸ್ಯರಾದ ಹರೀಶ್ ಮಣ್ಣಗುಂಡಿ, ಕುಸುಮಾ ಸುರೇಶ್ ಸಹಕರಿಸಿದರು.