ಪುತ್ತೂರಿನ ತಟ್ಟಿರಾಯ ಕಲಾಚತುರ ಬಿರುದು ಪಡೆದಿರುವ ತುಳು ರಂಗಭೂಮಿಯ ಹಾಸ್ಯ ಕಲಾವಿದ ಬನ್ನೂರಿನ ಅಶೋಕ. ಅಶೋಕ್ ರಂಗ ಪಯಣದಲ್ಲಿ ದೊಡ್ಡ ಕನಸು ಕಂಡ ಚಿಕ್ಕ ಕಲಾವಿದ. ರಂಗಭೂಮಿಯಲ್ಲಿ ಅಶೋಕ್ ಬನ್ನೂರು ಕನಸನ್ನು ನನಸು ಮಾಡಿಬಿಟ್ಟಿದ್ದಾರೆ. ಕಲಾಭಿಮಾನಿಗಳ ಮನಸ್ಸಿನಲ್ಲಿ ಒಬ್ಬ ಉತ್ತಮ ಹಾಸ್ಯ ಕಲಾವಿದನಾಗಿ ಉಳಿದುಬಿಟ್ಟಾಗಿದೆ. ಇದು ಬನ್ನೂರಿನ ಕಲಾಚತುರ ಅಶೋಕಣ್ಣನ ಕಥೆ.
ಹೌದು ಇವರು ವೇದಿಕೆಗೆ ಬಂದರೆ ಚಪ್ಪಾಳೆ ಚಪ್ಪಾಳೆ. ಹಾಸ್ಯಲೋಕದ ದಿಗ್ಗಜರಲ್ಲಿ ಒಬ್ಬ ಪುತ್ತೂರಿನ ಚಿಕ್ಕ ಮುತ್ತು ನಮ್ಮ ಅಶೋಕ್ ಬನ್ನೂರು. ತನ್ನದೇ ಶೈಲಿಯಲ್ಲಿ ಹಾಸ್ಯವನ್ನು ಎದುರು ಕುಳಿತ ಕಲಾಭಿಮಾನಿಗಳಿಗೆ ನೀಡುವಂತ ಒಬ್ಬ ರಂಗಭೂಮಿಯ ಪುತ್ತೂರಿನ ಕಲಾವಿದ. ತನ್ನ ಜೀವನದಲ್ಲಿ ಅದೆಷ್ಟು ಕಷ್ಟಗಳಿದ್ದರೂ ರಂಗಭೂಮಿ ಎಂದ ಕೂಡಲೇ ಅದನ್ನೆಲ್ಲ ಬದಿಗಿಟ್ಟು ಇಂದಿಗೂ ಕೂಡ ತುಳು ರಂಗಭೂಮಿ ನಾಟಕಗಳಲ್ಲಿ, ಯಕ್ಷಗಾನಗಳಲ್ಲಿ ನಟಿಸುತ್ತಿರುವ ಒಬ್ಬ ಮುಗ್ಧ ಮನಸ್ಸಿನ ಕಲಾವಿದ ಅಶೋಕ್ ಬನ್ನೂರು. ಪುತ್ತೂರಿನ ಪ್ರಸಿದ್ಧ ನಾಟಕ ತಂಡದಲ್ಲಿ ಇವರ ಅಭಿನಯ ಪುತ್ತೂರಿನ ಕಲಾಭಿಮಾನಿಗಳು ಎಲ್ಲರೂ ನೋಡಿರಬಹುದು..
ಯಾಕೋ ಇವರ ಬಗ್ಗೆ ಬರೆಯಬೇಕೆಂದೆನಿಸಿತು. ಯಾಕೆಂದರೆ..? ಸ್ವಲ್ಪ ರಫ್ ಹ್ಯಾಂಡ್ ಟಫ್ ಕಲಾವಿದ. ಇದ್ದ ವಿಷಯವನ್ನು ಇದ್ದ ಹಾಗೆ ತಂಡದಲ್ಲಿ ಆಗಲಿ ನಾಟಕದಲ್ಲಿ ಆಗಲಿ ಹೇಳುವ ಒಬ್ಬ ಧೀರ ಕಲಾವಿದ. ಕಲಾವಿದರನ್ನು ತನ್ನ ಮನೆಗೆ ಕರೆದು ಅವರ ಮನೆಯಲ್ಲಿ ಎಷ್ಟೇ ಕಷ್ಟ ಇದ್ದರೂ ಕಲಾವಿದನಿಗೆ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ರಾತ್ರಿ ಸಮಯದಲ್ಲಿ ಪುತ್ತೂರಿನಲ್ಲಿ ನೀಡುವಂತ ಒಬ್ಬ ಕಲಾವಿದ ಅಶೋಕ್ ಬನ್ನೂರು. ಯಾಕಂದರೆ ನಾನು ಕೂಡ ಅದೆಷ್ಟೋ ಸಲ ಅಶೋಕ್ ಬನ್ನೂರು ಅವರ ತಾಯಿಯ ಕೈ ತುತ್ತು ತಿಂದು ರಂಗಭೂಮಿಯ ಸೇವೆಗೆ ಹೋಗಿದ್ದೇನೆ.
ಪುತ್ತೂರಿನ ರಂಗಭೂಮಿಗೆ ಅಶೋಕ್ ಬನ್ನೂರು ಒಂದು ದೊಡ್ಡ ಕಲಾವಿದ. ಈ ಮಾತನ್ನು ನಾನು ಹೇಳಬೇಕೆಂದಿಲ್ಲ ಪುತ್ತೂರಿನ ಕಲಾಭಿಮಾನಿಗಳಿಗೆ ಖಂಡಿತ ಇದು ತಿಳಿದಿರುವ ವಿಷಯ… ತುಳು ರಂಗಭೂಮಿಯಲ್ಲಿ ಅಶೋಕ್ ಬನ್ನೂರು ಅವರ ಸಾಧನೆ ತುಂಬಾ ಇದೆ. ತುಳು ಚಲನಚಿತ್ರ, ತುಳು ಸೀರಿಯಲ್, ತುಳು ಶಾರ್ಟ್ ಮೂವಿ, ತುಳು ನಾಟಕ ಇವುಗಳಲ್ಲಿ ಎಲ್ಲಾ ನೀವು ಅಶೋಕ್ ಅವ್ರನ್ನು ನೋಡಬಹುದು. ಒಬ್ಬ ಕಲಾವಿದನ ಬಗ್ಗೆ ಹೇಳಲು ನಮಗೂ ಕೂಡ ತಿಳುವಳಿಕೆ ಮಾಹಿತಿ ಬೇಕಲ್ಲವೇ…ಅದಕ್ಕೆ ಅಶೋಕ್ ಬನ್ನೂರು ಅವರ ಬಗ್ಗೆ ತಿಳಿದುಕೊಳ್ಳಬೇಕಾದರೆ ಒಮ್ಮೆ ಯೂಟ್ಯೂಬ್ ನೋಡಿ. ರಂಗಭೂಮಿಯಲ್ಲಿ ಅವರು ಎಷ್ಟು ತಮ್ಮ ಸಮಯವನ್ನು ಕಲೆಯುತ್ತಿದ್ದಾರೆ ಎಂದು ತಿಳಿಯುತ್ತದೆ. ಒಂದು ಮಾತ್ರ ಸತ್ಯ. ತಾಯಿ ಒಬ್ಬಳು ಜೊತೆಗಿದ್ದರೆ ಒಬ್ಬ ಕಲಾವಿದನಿಗೆ ಅದಕ್ಕಿಂತ ದೊಡ್ಡ ಶಕ್ತಿ ಬೇರೆ ಯಾವುದು ಇಲ್ಲ. ಒಬ್ಬ ಕಲಾವಿದನಿಗೆ ತಾಯಿ ನೀಡಿರುವ ಪ್ರೋತ್ಸಾಹ ಹೇಗಿರಬೇಕೆಂದರೆ ಅದಕ್ಕೆ ಉದಾಹರಣೆ ಅಶೋಕ್ ಬನ್ನೂರು ಅವರ ತಾಯಿ ಹೇಳಿರುವ ಮಾತಿನಲ್ಲಿ ಕುತೂಹಲ ಇದೆಯಾ??? ಅಥವಾ ಸಂಶಯ ಇದೆಯಾ??? ಆಗಿದ್ದರೆ ಒಮ್ಮೆ ಅಶೋಕ್ ಬನ್ನೂರು ಎಂಬ ಹಾಸ್ಯ ಕಲಾವಿದನ ಮನೆಗೆ ನಾವೆಲ್ಲ ಸಣ್ಣ ಕಲಾವಿದರಾಗಿ ಹೋಗಿ ನೋಡೋಣ ಅವರ ಹಾಸ್ಯದ ಹಿಂದಿನ ನೋವುಗಳನ್ನು ನೋಡಿ ಬರೋಣ…
ಅದೇ ರೀತಿ ಇತಿಹಾಸ ಪ್ರಸಿದ್ಧ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಾಗೂ ಪುತ್ತೂರಿನ ಆಸುಪಾಸಿನ ಹಲವಾರು ದೇವಸ್ಥಾನಗಳಲ್ಲಿ ಅಶೋಕ್ ಬನ್ನೂರು ಬೇತಾಲನನ್ನು ಹೋರುವ ಸೇವೆಯನ್ನು ಕೂಡ ಭಕ್ತಿ ಪೂರ್ವಕವಾಗಿ ಮಾಡುತ್ತಿದ್ದಾರೆ. ಅದೇ ರೀತಿ ದಸರಾ ಸಂದರ್ಭದಲ್ಲಿ ಅಶೋಕಣ್ಣ ಹುಲಿ ವೇಷದ ರಂಗ್ ಕೂಡ ನೋಡಬಹುದಾಗಿದೆ.
ಇದಕ್ಕೆ ಹೇಳುವುದಲ್ಲವೇ ಕಲಾವಿದನ ಬದುಕು ಎಂದು. ಪ್ರಸ್ತುತ ಈಗ ಅಶೋಕಣ್ಣ ಅಮ್ಮ ಕಲಾವಿದೆರ್ ಕುಡ್ಲ ತಂಡದಲ್ಲಿ ತಮ್ಮ ರಂಗ ಪಯಣವನ್ನು ನಡೆಸುತ್ತಿದ್ದಾರೆ.. ನಿಮ್ಮ ರಂಗ ಪಯಣ ನೀವು ಕಂಡಂತೆ ಮುಂದುವರಿಯಲಿ. ಪುತ್ತೂರಿನಲ್ಲಿ ಅಶೋಕ್ ಬನ್ನೂರು ಎಂಬ ಹಾಸ್ಯ ಕಲಾವಿದನ ಹೆಸರು ಮತ್ತಷ್ಟು ಬಲಿಷ್ಠವಾಗಿ ಕೇಳಿ ಬರಲಿ. ಕಲಾಮಾತೆಯ ಆಶೀರ್ವಾದ ಹಾಗೂ ತುಳು ನಾಡಿನ ದೈವ ದೇವರುಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ.
ಮತ್ತೆ ಸಿಗೋಣ. ಇನ್ನೊಂದು ಉತ್ತಮ ಕಲಾವಿದನಾಗಿ/ ಕಲಾವಿದನ ಬಣ್ಣದ ಬದುಕಿನ ಪಯಣದ ಬರಹದೊಂದಿಗೆ…
✍️ಅನಿಲ್ ಇರ್ದೆ✍️