ಕಲಾವಿದೆಯ ಬದುಕು

ತುಳುನಾಡಿನ ರಂಗಭೂಮಿ ಕಂಡ ರಂಗನಾಯಕಿ ಜ್ಯೋತಿ ಕುಲಾಲ್ ಪುತ್ತೂರು. ರಂಗಭೂಮಿಯಲ್ಲಿ ಹೆಣ್ಣು ಕಲಾವಿದಯೊಬ್ಬಳು ಕಲಾವಿದೆಯಾಗಿ ಹೆಸರು ಮಾಡಬೇಕಾದರೆ ಸುಲಭದ ಕೆಲಸವಲ್ಲ ಬಿಡಿ. ಅದೆಷ್ಟು ಸಮಾಜದ ಮಾತುಗಳನ್ನು ಕೇಳಿ ಎಷ್ಟು ಕಲಾವಿದೆಯರು ತಮ್ಮ ಕಲಾ ಸೇವೆಯನ್ನು ಅರ್ಧಕ್ಕೆ ನಿಲ್ಲಿಸಿದ್ದು ಎಷ್ಟೋ ಉದಾಹರಣೆಗಳಿವೆ. ಆದರೆ ಈ ಕಲಾವಿದೆಯೊಬ್ಬರು ರಂಗಭೂಮಿಯಲ್ಲಿ ಸಾಧನೆ ಮಾಡಿ ಹೇಗೆ ಸಮಾಜಕ್ಕೆ ಉತ್ತರ ನೀಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಅವರೇ ರಂಗನಾಯಕಿ ನಮ್ಮ ಪುತ್ತೂರಿನ ಕಲಾವಿದೆ ಜ್ಯೋತಿ ಕುಲಾಲ್‍.

ಹೆಚ್ಚಾಗಿ ಜ್ಯೋತಿ ಅಕ್ಕ ನಮಗೆ ಕಾನ ಸಿಗುವುದು ಹಾಸ್ಯ ಪಾತ್ರಗಳಲ್ಲಿ ಹಾಗಂತ ಯಾವುದೇ ಪಾತ್ರ ಕೊಟ್ಟರು ಅದನ್ನು ಬಹಳ ಅಚ್ಚುಕಟ್ಟಾಗಿ ಅಭಿನಯಿಸುವ ಉತ್ತಮ ಕಲಾವಿದೆ. ನಾವು ಒಬ್ಬ ಕಲಾವಿದರಾಗಿ ಪ್ರೇಕ್ಷಕರಾಗಿ ಈ ಮಾತುಗಳನ್ನು ಒಪ್ಪಿಕೊಳ್ಳಲೇಬೇಕು ಯಾಕೆಂದರೆ ಜ್ಯೋತಿ ಕುಲಾಲ್‍ ಅವರ ಅಭಿನಯ ನಾವೆಲ್ಲ ನೋಡಿದವರೇ ಅದರಲ್ಲಿ ಎರಡು ಮಾತಿಲ್ಲ..

ಹಾಸ್ಯ ಪಾತ್ರಕ್ಕೆ ಸರಿಯಾದ ದೇಹದ ತೂಕ ಕೂಡ.. ಕುಳ್ಳಿ ಅಕ್ಕ ನಮ್ಮ ಜ್ಯೋತಿ ಅಕ್ಕ. ಇದು ತಮಾಷೆಯಲ್ಲ ಅಕ್ಕ ಮಾತಿನಲ್ಲಿ ತಪ್ಪಿದ್ದರೆ ಕ್ಷಮಿಸಿ. ಇದು ಪ್ರತಿಯೊಬ್ಬ ಕಲಾವಿದ, ಪ್ರೇಕ್ಷಕರು ಜ್ಯೋತಿ ಅವರನ್ನು ನೋಡಿದಾಗ ಪ್ರೀತಿಯಿಂದ ಹೇಳುವ ಮಾತುಗಳು. ಆ ಪ್ರೀತಿಗೆ ರಂಗ ಭೂಮಿಯ ಮೂಲಕ ಉತ್ತರವನ್ನು ಕೂಡ ಜ್ಯೋತಿ ಕುಲಾಲ್‍ ಅವರು ಕೊಟ್ಟಿದ್ದಾರೆ. ಈಗ ಕೂಡ ಪ್ರತಿದಿನ ರಂಗಭೂಮಿಯಲ್ಲಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ 





























 
 

ಪುತ್ತೂರಿನ ಅದೆಷ್ಟೋ ವೇದಿಕೆಗಳಲ್ಲಿ ಇವರು ಅಭಿನಯವನ್ನು ಮಾಡಿ ಕಲಾಭಿಮಾನಿಗಳ ಕಲಾವಿದರ ಮನಸ್ಸನ್ನು ಗೆದ್ದಾಗಿದೆ.. ಅದೆಷ್ಟು ತುಳು ಸಿನಿಮಾದಲ್ಲಿ ಕೂಡ ಇವರನ್ನು ನೋಡಿರಬಹುದು.. ಮುಂದೆ ಬರುವ ತುಂಬಾ ಸಿನಿಮಾದಲ್ಲಿ ಇವರ ಪಾತ್ರಗಳು ಸಿದ್ಧವಾಗಿ ನಿಂತಿದೆ.. ರಂಗಭೂಮಿಯ ಸಾಧನೆಯ ಮೂಲಕ ಒಂದಷ್ಟು ಪ್ರಶಸ್ತಿಗಳನ್ನು, ಸನ್ಮಾನಗಳನ್ನು ಪಡೆದುಕೊಂಡಿದ್ದಾರೆ ಜ್ಯೋತಿ ಕುಲಾಲ್‍. ಬಹಳ ಸಂತೋಷವಾಗುತ್ತಿದೆ. ರಂಗಭೂಮಿಯಲ್ಲಿ ಇವರ ಸಾಧನೆ ಹೇಳಲು ಹೊರಟರೆ ತುಂಬಾ ಇದೆ ಬರೆದು ಮುಗಿವುದಲ್ಲ. ಅದಕ್ಕೆ ಜ್ಯೋತಿ ಕುಲಾಲ್‍ ಅವರ ಅಭಿನಯವನ್ನೇ ನೀವು ನೋಡಿ ಬನ್ನಿ ಎಲ್ಲದಕ್ಕೂ ಉತ್ತರ ಸಿಗುತ್ತದೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ. ಹೆಣ್ಣೊಂದು ರಂಗಭೂಮಿಗೆ ಕಾಲಿಟ್ಟರೆ ಅದು ಜ್ಯೋತಿಯವರಂತಿರಬೇಕು. ಇದು ನಾನು ಕಂಡ ಸತ್ಯ. ರಂಗಭೂಮಿ ಎಂಬ ದೊಡ್ಡ ಬೆಟ್ಟವನ್ನು ಆಯ್ಕೆ ಮಾಡಿದ್ದೀರಿ ಆ ಬೆಟ್ಟವನ್ನು ಹತ್ತಿ ರಂಗಭೂಮಿಯಲ್ಲಿ ಒಬ್ಬಳು ಹೆಣ್ಣು ಕಲಾವಿದೆಯಾಗಿ ತಾನು ಕಲಿತ ಕಲಾ ಮಾತೆಯ ಸೇವೆಯನ್ನು ಪವಿತ್ರ ತುಳುನಾಡಿನ  ಪುಣ್ಯಭೂಮಿಯಲ್ಲಿ ಕಲಾಭಿಮಾನಿಗಳ ಎದುರಲ್ಲಿ ಅಭಿನಯದ ಮೂಲಕ ಮಾಡಿ ತೋರಿಸಿದ್ದೀರಿ . ಎಲ್ಲ ಕಲಾವಿದರನ್ನು ಪ್ರೀತಿಯಿಂದ ಗೌರವಿಸಿ ಮಾತನಾಡುವ ಕಲಾವಿದೆ ಜ್ಯೋತಿ ಅಕ್ಕ.. ಒಬ್ಬ ಕಲಾವಿದೆ / ಕಲಾವಿದನ ಬಗ್ಗೆ ಮಾತನಾಡಬೇಕಾದರೆ ಅವರ ಬಗ್ಗೆ ನಾವು ತಿಳಿದಿರಬೇಕು ಎಂದು ಮೊದಲೇ ಹೇಳಿದ್ದೆ … ಈ ಮಾತನ್ನು ಹೇಳಲು ಕಾರಣ ಇದೆ. ಅದಕ್ಕೆ ಒಂದು ಚಿಕ್ಕ ಉದಾಹರಣೆ ಕೂಡ ಸಾಕ್ಷಿ ಸಮೇತ ನೀಡುತ್ತೇನೆ.

ಒಂದಷ್ಟು ತಿಂಗಳ ಹಿಂದೆ ಒಂದು ತುಳು ಚಲನಚಿತ್ರದ ಚಿತ್ರೀಕರಣ ಮುಗಿಸಿ ಬರುತ್ತಿದ್ದ ಜ್ಯೋತಿ ಕುಲಾಲ್‍ ನನಗೆ ನನ್ನದೇ ಊರಿನಲ್ಲಿ ಇರ್ದೆಯಲ್ಲಿ ಸಿಕ್ಕಿದ್ದರು. ನಾನು ಅವರನ್ನು ಗಮನಿಸಿರಲಿಲ್ಲ. ಅವರೇ ತಾನು ಬಂದ ಗಾಡಿಯನ್ನು ನಿಲ್ಲಿಸಿ , ನನ್ನ ಜೊತೆ ಒಂದಷ್ಟು ಸಮಯದವರೆಗೆ ಕುಶಲ ಸಮಾಚಾರ ಪ್ರೀತಿಯಿಂದ ತಮಾಷೆ ಮಾತುಗಳನ್ನಾಡಿ ಹೋಗಿದ್ದರು. ನಾನು ಮಾತನಾಡುತ್ತಿರುವುದನ್ನು ನನ್ನ ಗೆಳೆಯರು ನೋಡುತ್ತಿದ್ದರು. ಜ್ಯೋತಿ ಕುಲಾಲ್‍ ಅವರು ಹೋದ ಮೇಲೆ ನನ್ನ ಗೆಳೆಯರು  ಕೇಳಿದರು ಅವರನ್ನು ಎಲ್ಲಿಯೂ ನೋಡಿದ ಹಾಗೆ ಇದೆ ಯಾರು ಅವರೆಂದು?? ಸಿನಿಮಾ ಅಥವಾ ನಾಟಕದಲ್ಲಿ ಇದ್ದಾರಾ ಎಂದು..??? ಹೌದು ಎಂದು ನಾನು ನನ್ನ ಗೆಳೆಯರಿಗೆ ಹೇಳಿದೆ.. ನಾವು ಕೂಡ ಅವರನ್ನು ಸಿನಿಮಾದಲ್ಲಿ ನಾಟಕದಲ್ಲಿ ನೋಡಿದ ನೆನಪು ಬರುತ್ತಿದೆ ಎಂದು ಹೇಳಿದರು ನನ್ನ ಗೆಳೆಯರು.. ನೋಡಿ ಒಂದು ಕಲಾವಿದರಿಗೆ ಪ್ರಸ್ತುತ ಈಗಿನ ಕಾಲಘಟ್ಟದಲ್ಲಿ ಯಾವ ರೀತಿಯ ಉತ್ತಮ ಗೌರ ಸಿಗುತ್ತಿದೆ ಎಂದು. ಗೌರವ ಉಳಿಸಿಕೊಳ್ಳುವ ಕೆಲಸಗಳನ್ನು, ಪಾತ್ರಗಳನ್ನು ಜ್ಯೋತಿ ಕುಲಾಲ್‍ ಅವರು ಮಾಡಿದ್ದಾರೆಂದು ಸ್ಪಷ್ಟವಾಗಿ ತಿಳಿಯುತ್ತದೆ. ನೋಡಿ ಸಾಕಲ್ಲವೆ ಇಷ್ಟು ಒಂದು ಕಲಾವಿದೆಯ ಸಾಧನೆಗೆ. ಸಿಗುವ ಗೌರವ. ಪ್ರತಿ ಊರಿನಲ್ಲಿ ಕೂಡ ಜ್ಯೋತಿ ಕುಲಾಲ್‍ ಅವರಿಗೆ ಅಭಿಮಾನಿಗಳು ಖಂಡಿತ ಇದ್ದಾರೆ. ಯಾಕೆಂದರೆ ಅವರು ರಂಗಭೂಮಿಯ ಮೇಲೆ ಇಟ್ಟಿರುವ ಪ್ರೀತಿ ಅಭಿಮಾನ ಹಾಗೂ ಅವರ ಪಾತ್ರ ಅಷ್ಟು ಅಚ್ಚುಕಟ್ಟಾಗಿದೆ.

ಪ್ರಸ್ತುತ ಜ್ಯೋತಿ ಕುಲಾಲ್‍ ಅವರು ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ನಾಟಕ ತಂಡದಲ್ಲಿ ತಮ್ಮ ರಂಗ ಪಯಣವನ್ನು ನಡೆಸುತ್ತಿದ್ದಾರೆ.. ನಿಮ್ಮ ರಂಗ ಪಯಣ ಯಶಸ್ವಿಯಾಗಿ ಸಾಗಲಿ ನಿಮ್ಮ ಮೂಲಕ ಇನ್ನಷ್ಟು ಹೊಸ ಹೊಸ ಪಾತ್ರಗಳು, ಅಭಿನಯಗಳು ಮೂಡಿ ಬರಲಿ. ಮುಂದೆ ರಂಗಭೂಮಿಗೆ ಬರುವ ಎಲ್ಲಾ ಕಲಾವಿದೆಯರಿಗೆ ನಿಮ್ಮಿಂದ ಪ್ರೇರಣೆ ಸಿಗಲಿ. ನೀವು ಕಂಡ ಕನಸೆಲ್ಲ ನನಸಾಗಲಿ ಕಲಾ ಮಾತೆಯ ಹಾಗೂ ತುಳುನಾಡಿನ ದೈವ ದೇವರುಗಳ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ

ಮತ್ತೆ ಸಿಗೋಣ….ಇನ್ನೊಂದು ಉತ್ತಮ ಕಲಾವಿದೆಯಾಗಿ / ಕಲಾವಿದೆಯ ಬಣ್ಣದ ಬದುಕಿನ ಪಯಣದ ಬರಹದೊಂದಿಗೆ.. ಧನ್ಯವಾದಗಳು

 ✍️ಅನಿಲ್ ಇರ್ದೆ✍️

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top