ಪುತ್ತೂರು : ಸುಳ್ಯದ ಯುವ ಸಂಗೀತ ಹಾಗೂ ಚಿತ್ರ ನಿರ್ದೇಶಕ ಮಯೂರ ಅಂಬೆಕಲ್ಲು ನಿರ್ಮಾಣದ “ಭಾವ ತೀರ ಯಾನ’ ಸಿನಿಮಾ ಪ್ರೇಕ್ಷಕರ ಮೆಚ್ಚುಗೆ ಪಡೆದು 60 ನೇ ದಿನಕ್ಕೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು ಚಿತ್ರಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ನಾಳೆ ಏ.20 ಮಂಗಳವಾರದಂದು ಬೆಳಗ್ಗೆ 11:00 ಗಂಟೆಗೆ ಚಿತ್ರ ಪ್ರದರ್ಶನಗೊಳ್ಳಲಿದೆ.
ಪುತ್ತೂರಿನ ಜಿ ಎಲ್ ಒನ್ ಮಾಲ್‍ನ ಭಾರತ್ ಸಿನಿಮಾಸ್ ನಲ್ಲಿ ನಾಳೆ ಭಾವ ತೀರ ಯಾನ ಸಿನಿಮಾ ಕೊನೆಯ ಪ್ರದರ್ಶನವಾಗಿದ್ದು, ಸಿನಿಪ್ರಿಯರು ಪುತ್ತೂರಿನಲ್ಲಿರುವ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಸಿನಿಮಾ ನೋಡಲು ಕೊನೆಯ ಅವಕಾಶ . 60 ದಿನಗಳಷ್ಟು ಭಾವ ತೀರ ಯಾನ ಸಿನಿಮಾವನ್ನು ನೋಡಿದ ಸಿನಿ ಪ್ರಿಯರಿಗೆ, ಮಾಧ್ಯಮ ಮಿತ್ರರಿಗೆ ಹಾಗೂ ಈ ಸಿನಿಮಾದಲ್ಲಿ ಮೀಡಿಯಾ ಪಾರ್ಟ್ನರ್ ಆಗಿ ಕಾರ್ಯನಿರ್ವಹಿಸಿದ ನ್ಯೂಸ್ ಪುತ್ತೂರು ವಾಹಿಣಿಗೆ ಧನ್ಯವಾದವನ್ನು ನಿರ್ದೇಶಕರಾದ ಮಯೂರ್ ಅಂಬೆಕಲ್ಲು ಹಾಗೂ ನಿರ್ಮಾಪಕರಾದ ಶೈಲೇಶ್ ಅಂಬೆಕಲ್ಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.