ಪುತ್ತೂರು ಕೃಷ್ಣ ನಗರ ಸ್ಕಂದ ನಿವಾಸದಲ್ಲಿ ಧಾರ್ಮಿಕ ಸಮಾರಂಭದ ಸಭಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಒಂಬತ್ತನೇ ರಾಂಕ್ ಪಡೆದ ಪುತ್ತೂರು ಸೈಂಟ್ ಫಿಲೋಮಿನಾ ಪದವಿಪೂರ್ವ ಕಾಲೇಜಿನ ನೀತಿ ಮತ್ತು ಸಮಾಜ ಕಲ್ಯಾಣ ಸಂಸ್ಥೆ.ರಿ ಬೆಂಗಳೂರು ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಯಕ್ಷಗಾನ ಕ್ಷೇತ್ರದ ಸಾಧನೆಗಾಗಿ ಯಕ್ಷಗಾನ ಕಲಾರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಶ್ರುತಿ ವಿಸ್ಮಿತ್ ಬಲ್ನಾಡು ಇವರನ್ನು ಕಾರ್ಯಕ್ರಮದ ಆಯೋಜಕರಾದ ಗುಡ್ಡಪ್ಪ ಬಲ್ಯ, ಕುಸುಮ ಮತ್ತು ಕುಟುಂಬಸ್ಥರು ಸನ್ಮಾನಿಸಿದರು. ಕು. ನೇಹಾ ಅಭಿನಂದಿಸಿದರು.

ಬಳಿಕ ಪಾರ್ಥ ಸಾರಥ್ಯ, ಸಂಜಯ ರಾಯಭಾರ ತಾಳಮದ್ದಳೆಯಲ್ಲಿ ಭಾಗವತರಾಗಿ ಗೋವಿಂದ ನಾಯಕ್ ಪಾಲ್ಜಾರು, ಲಕ್ಷ್ಮೀನಾರಾಯಣಶೆಟ್ಟಿ ನೆಲ್ಯಾಡಿ, ಸತೀಶ್ ಇರ್ದೆ, ಕುಸುಮಾಕರ ಆಚಾರ್ಯ ಹಳೆನೇರಂಕಿ, ಪದ್ಮನಾಭ ಕುಲಾಲ್ ಉಪ್ಪಿನಂಗಡಿ, ಆನಂದ ಸವಣೂರು, ಹಿಮ್ಮೇಳದಲ್ಲಿ ಪದ್ಯಾಣ ಶಂಕರ್ ನಾರಾಯಣ ಭಟ್ ಮುರಳಿದರ ಕಲ್ಲೂರಾಯ, ಶ್ರೀಪತಿ ಭಟ್ ಉಪ್ಪಿನಂಗಡಿ ಸುಬ್ರಹ್ಮಣ್ಯ ಶಗ್ರಿತ್ತಾಯ ಕೊಕ್ಕಡ, ದಿವಾಕರ ಆಚಾರ್ಯ ನೇರೆಂಕಿ, ಅರ್ಥದಾರಿಗಳಾಗಿ ಪಾರ್ಥ ಸಾರಥ್ಯದಲ್ಲಿ ರಾಧಾಕೃಷ್ಣ ಕಲ್ಚಾರ್, ದಿವಾಕರ ಆಚಾರ್ಯ ಗೇರುಕಟ್ಟೆ, ಗುಂಡ್ಯಡ್ಕ ಈಶ್ವರ ಭಟ್, ತಿಮ್ಮಪ್ಪ ಕೋಟೆಕಾರ್, ಹರಿಣಾಕ್ಷಿ ಶೆಟ್ಟಿ, ಹರೀಶ ಆಚಾರ್ಯ ಬಾರ್ಯ ಸಂಜಯ ರಾಯಭಾರದಲ್ಲಿ ಶುಭಾ ಅಡಿಗ, ಕಿಶೋರಿ ದುಗ್ಗಪ್ಪ, ಜಯರಾಮ ನಾಲ್ಗುತ್ತು, ದುಗಪ್ಪ ನಡುಗಲ್ಲು, ಶ್ರುತಿ ವಿಸ್ಮಿತ್, ಹರೀಶ್ ಆಚಾರ್ಯ ಬಾರ್ಯ ಭಾಗವಹಿಸಿದ್ದರು.
ದಿವಾಕರ ಆಚಾರ್ಯ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಗುಡ್ಡಪ್ಪ ಬಲ್ಯ ವಂದಿಸಿದರು.