ಪುತ್ತೂರು:: ಈ ಸುಂದರ ಪ್ರಪಂಚದಲ್ಲಿ ಅತ್ಯಂತ ನಿಜವಾದ ಖುಷಿ ನೀಡುವುದು ನಗ್ತಾ ಇರುವ ಮಗು. ನಗುಮುಖದ ಎದುರು ಯಾವುದೂ ಇಲ್ಲ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಲ್ಲಾ ಕೆಲಸಗಳನ್ನು ನಗುಮುಖದಿಂದ, ಖುಷಿಯಿಂದ ಮಾಡಿ.
ಹೀಗೆಂದು ಹೇಳಿದರು ಖ್ಯಾತ ಚಲನಚಿತ್ರ ನಟ ರಮೇಶ್ ಅರವಿಂದ್.

ಅವರು ಭಾನುವಾರ ಪುತ್ತೂರಿನಲ್ಲಿ ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣದ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನವೀಕೃತ ಶೋರೂಂನ್ನು ಪರದೆ ಸರಿಸಿ, ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಜೀವನದಲ್ಲಿ ಸಕ್ಷಸ್‍ಎಂಬುದು ಖುಷಿಯ ಜತೆ ಇದೆ. ನಮ್ಮ ಕೊರತೆ, ತಪ್ಪುಗಳನ್ನು ನಾವೇ ಅರ್ಥ ಮಾಡಿಕೊಂಡರೆ ಖುಷಿಯಿಂದ ಇರಬಹುದು. ನಾವು ಮಾಡು ಕೆಲಸದಲ್ಲಿ ಎಫಿಶಿಯನ್ಸ್ ಇರಬೇಕು ಎಂದ ಅವರು, ಇದೀಗ ಮುಳಿಯದ ಬ್ರಾಂಡ್ ಅಂಬಾಸಿಡರ್ ಆಗಲು ಮುಳಿಯ ಕುಟುಂಬದ ಸಂಸ್ಕೃತಿ, ಅವರ ಸ್ಲೋಗನ್ ಕ್ರಿಯೇಟಿವ್ ಹೆಪ್ಪಿನೆಸ್ ಇಷ್ಟ ಆಯಿತು. ಈಗಾಗಲೇ ಮುಳಿಯ ಸಂಸ್ಥೆಯವರು ಚಿನ್ನದ ಉದ್ಯಮ ಆರಂಭಿಸಿ 80 ವರ್ಷ ಆಯಿತು. ಗ್ರಾಹಕ ವರ್ಗದವರಲ್ಲಿ ಇಟ್ಟ ಪ್ರೀತಿ, ವಿಶ್ವಾಸವೇ ಇದಕ್ಕೆ ಕಾರಣ. ನಾವು ನೀಡಿದ ಮಾತನ್ನು ಉಳಿಸಿಕೊಂಡರೆ 100 ಅಲ್ಲ 150 ವರ್ಷ ಸಂಸ್ಥೆಯನ್ನು ಉಳಿಸಬಹುದು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಳಿಯ ಸಂಸ್ಥೆಯ ಚೆಯರ್ ಮೆನ್ ಕೇಶವ ಪ್ರಸಾದ್ ಮುಳಿಯ ಪ್ರಾಸ್ತಾವಿಕವಾಗಿ ಮಾತನಾಡಿ, 81 ವರ್ಷಗಳ ಹಿಂದೆ ನನ್ನ ಅಜ್ಜ ಕೇಶವ ಭಟ್ ಸಂಸ್ಥೆಯನ್ನು ಆರಂಭಿಸಿದ್ದರು. ಆಗ ಕೇವಲ 74 ಚದರ ಅಡಿ ಇದ್ದ ಶೋರೂಂ ಬಳಿಕದ ದಿನಗಳಲ್ಲಿ 400 ಚದರ ಅಡಿ ವಿಸ್ತೀರ್ಣ ಆಯಿತು. ಬಳಿಕ 2008 ರಲ್ಲಿ ಮಡಿಕೇರಿಯಲ್ಲಿ, 2011 ರಲ್ಲಿ ಗೋಪ್ಪಲ್, 2018 ರಲ್ಲಿ ಬೆಳ್ತಂಗಡಿ, ಬಳಿಕ ಬೆಂಗಳೂರಿನಲ್ಲಿ ಶೋರೂಂ ತೆರೆದೆವು. ಸಂಸ್ಥೆ ಇಷ್ಟೊಂದು ಬೆಳೆಯಲು ಶಿಸ್ತು ಕಾರಣವಾಗಿದೆ. ಗ್ರಾಹಕರಿಗೆ ನಷ್ಟ ಆಗಬಾರದು ಎಂಬುದು ಮುಳಿಯ ಬ್ರಾಂಡ್‍ನ ವ್ಯಕ್ತಿತ್ವ. ಇದೀಗ ನಮ್ಮ ಮುಂದಿನ ಗುರಿ 5 ಸಾವಿರ ಕೋಟಿ ವ್ಯವಹಾರ ನಡೆಸುವುದು. ಇದಕ್ಕೆ ಸಾರಥಿಯಾಗಿ ರಮೇಶ್ ಅರವಿಂದ್ ಅವರು ಮುನ್ನಡೆಸಲಿದ್ದಾರೆ ಎಂದರು.
ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣನಾರಾಯಣ ಮುಳಿಯ ಮಾತನಾಡಿ, ದ.ಕ. ಸೇರಿದಂತೆ ಬೆಂಗಳೂರು, ಮಡಿಕೇರಿ, ಗೋಣಿಕೊಪ್ಪಲ್, ಬೆಳ್ತಂಗಡಿಗಳಲ್ಲಿ ಗ್ರಾಹಕರು ಇಟ್ಟಿರುವ ವಿಶ್ವಾಸ ನಮ್ಮನ್ನು ಬೆಳೆಸಿದೆ. ಗ್ರಾಹಕರಿಗೆ ಅತ್ಯುತ್ತಮ ಆಯ್ಕೆ ನೀಡುವುದರ ಜತೆಗೆ ಸೇವೆಯನ್ನೂ ನೀಡಬೇಕು ಎಂಬುದು ನಮ್ಮ ಆಶಯ ಎಂದರು.
ಸಮಾರಂಭದಲ್ಲಿ ಶೋರೂಂ ನಿರ್ಮಾಣದಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಶ್ಯಾಮ್ ಭಟ್ ಮುಳಿಯ, ಸುಲೋಚನಾ ಶ್ಯಾಮ್ ಭಟ್ ಮುಳಿಯ, ಆಡಳಿತ ನಿರ್ದೇಶಕರಾದ ಅಶ್ವಿನಿ ಕೃಷ್ಣ ಮುಳಿಯ, ಕೃಷ್ಣವೇಣಿ ಮುಳಿಯ ಉಪಸ್ಥಿತರಿದ್ದರು.
ಬಿಗ್‍ಬಾಸ್‍ನ ಬ್ಯಾಕ್‍ಗ್ರೌಂಡ್ ವಾಯ್ಸ್ ಖ್ಯಾತಿಯ ಬಡೆಕ್ಕಿಲ ಪ್ರದೀಪ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಬ್ರ್ಯಾಂಡ್ ಕನ್ಸಲ್ಟೆಂಟ್ ವೇಣು ಶರ್ಮ ಸ್ವಾಗತಿಸಿದರು. ಅಕೌಂಟ್ಸ್ ಮ್ಯಾನೇಜರ್ ಶಿವಪ್ರಸಾದ್ ವಂದಿಸಿದರು.
ಕಾರ್ಯಕ್ರಮದ ಮೊದಲಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಶ್ರೀ ದೇವರಿಗೆ ದೀಪ ಉರಿಸಿ ಆ ದೀಪವನ್ನು ರಮೇಶ್ ಅರವಿಂದ್ ಅವರು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಶೋರೂಂಗೆ ಬಂದು ಅದೇ ದೀಪದಿಂದ ಸಂಸ್ಥೆಯಲ್ಲಿ ದೀಪ ಉರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಮೇಶ್ ಅರವಿಂದ್ ಅವರಿಗೆ ರಮೇಶ್ ಕಡ ಎಂಬ ಹೆಸರಿನೊಂದಿಗೆ ಚಿನ್ನದ ಕಡವನ್ನು ಅವರ ಕೈಗೆ ತೊಡಿಸಲಾಯಿತು. 10 ಸಾವಿರ ಚದರ ಅಡಿ ವಿಸ್ತೀರ್ಣದ ವಿಶಾಲ ವಿಸ್ತರಿತ ಮಳಿಗೆಯಲ್ಲಿ ಬೆಳ್ಳಿ, ಚಿನ್ನ ಮತ್ತು ವಜ್ರಾಭರಣಗಳ ಪ್ರತ್ಯೇಕ ಕೌಂಟರ್‌ಗಳಿವೆ. ಮಕ್ಕಳ ಆಟೋಟ ಕೊಠಡಿ, ಶಿಶು ಆರೈಕೆ ಕೊಠಡಿ, ವಾಚ್ ಸೆಂಟರ್, ಶೌಚಾಲಯ, ವ್ಯಾಲೆಟ್ ಪಾರ್ಕಿಂಗ್, ದೇಶದಲ್ಲೇ ಪ್ರಥಮ ಬಾರಿಗೆ ಎನ್ನಬಹುದಾದ ಗೋಲ್ಡ್ ಪ್ಯೂರಿಟಿ ಅನಲೈಸರ್, ಡೈಮಂಡ್ ಡಿಟೆಕ್ಟರ್ ಟೆಸ್ಟಿಂಗ್ ಮಿಶನ್ ಇದೆ. ಮಧ್ಯಾಹ್ನ ಗ್ರಾಹಕರಿಗೆ ಭೋಜನ ವ್ಯವಸ್ಥೆ, ಸಂಜೆ ಉಪಾಹಾರ ವ್ಯವಸ್ಥೆ ಇದೆ. ಬೆಳ್ಳಿಯ ದೈವಾಭರಣ ಮತ್ತು ದೇವರ ಆಭರಣಗಳನ್ನು ಕೇವಲ ತಯಾರಿಕಾ ವೆಚ್ಚದಲ್ಲಿ (ಲಾಭ ರಹಿತ) ನೀಡಲಾಗುತ್ತದೆ.