ಪುಣಚ : ಯಕ್ಷನಮನ ಆಜೇರು ಪುಣಚ. ಇದರ 25 ನೇ ವರ್ಷದ ಯಕ್ಷ ಸಂಭ್ರಮ 25 ಕಾರ್ಯಕ್ರಮವನ್ನು ಶ್ರೀ ದುರ್ಗಾನಿಲಯದಲ್ಲಿ ನಡೆಯಿತು.
ಶ್ರೀ ಈಶ್ವರ ನಾಯಕ್ ಇವರ ಮನೆಯಲ್ಲಿ ಶ್ರೀ ಸತ್ಯ ನಾರಾಯಣ ಪೂಜೆಯ ಪ್ರಯುಕ್ತ ಯಕ್ಷ ಸಂಭ್ರಮ 25 ನಡೆಯಿತು. ಈ ಸಂದರ್ಭದಲ್ಲಿ ಹಿರಿಯ ಮದ್ದಲೆ ವಾದಕರಾದ ನೇರೋಳು ಗಣಪತಿ ನಾಯಕ್, ಕಾವ್ಯಶ್ರಿ ಗುರುಪ್ರಸಾದ್ ಆಜೇರು ಮತ್ತು ರಾಮದಾಸ್ ಶೆಟ್ಟಿ ದೇವಸ್ಯ ಇವರಿಗೆ ನಾಟ್ಯಚಾರ್ಯ ದಿ.ಮುದುಕುಂಜ ವಾಸುದೇವ ಪ್ರಭು ಇವರ ಸಂಸ್ಮರಣ ಅಂಗವಾಗಿ ಯಕ್ಷ ಸಂಜೀವ ಪ್ರಶಸ್ತಿಯನ್ನು ನೀಡಲಾಯಿತು.
ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಶ್ರೀ ದೇವಿಶಾಂಭವಿ ಯಕ್ಷಗಾನ ತಾಳಮದ್ದಳೆ ಜರುಗಿತು. ಹಿಮ್ಮೇಳ ದಲ್ಲಿ ಕಾವ್ಯಶ್ರೀ ಗುರುಪ್ರಸಾದ್ ಆಜೇರು, ಶ್ರೀಪತಿ ನಾಯಕ್, ಗಣಪತಿ ನಾಯಕ್, ರಾಮದಾಸ್ ಶೆಟ್ಟಿ, ಮದುಸೂದನ ಪ್ರಭು, ಅರ್ಥಧಾರಿಯಾಗಿ ಹಿರಿಯ ವಾಗ್ಮಿ ಲೇಖಕರಾದ ರಾಧಾಕೃಷ್ಣ ಕಲ್ಚರ್, ಹರೀಶ್ ಬಳಂತಿಮೊಗೇರು, ಗುಡ್ಡಪ್ಪ ಬಲ್ಯ,. ಸಚ್ಚಿದಾನಂದ ಪ್ರಭು ಆಜೇರು ಭಾಗವಹಿಸಿದರು. ಕಲಾವಿದರನ್ನು ಈಶ್ವರ ನಾಯಕ್, ಸಂತೋಷ ನಾಯಕ್ ಶಾಲು ನೀಡಿ ಗೌರವಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಪತಿ ನಾಯಕ್ ನೆರವೇರಿಸಿದರು.