ಪುತ್ತೂರು: ನಗರಸಭೆ ಬೆಂಗಳೂರು ಸಾಹಸ ಸರಕಾರೇತರ ಸಂಸ್ಥೆಯ ಸಹಯೋಗದೊಂದಿಗೆ ಎಚ್ ಡಿಬಿ ಫೈನಾನ್ಸಿಯಲ್ ಸರ್ವೀಸಸ್ ನ ಆರ್ಥಿಕ ನೆರವಿನ ಮೂಲಕ ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಸ್ಥಾಪಿಸಲಾಯಿತು.
ಪ್ಲಾಸ್ಟಿಕ್ ಬಾಟಲ್ ಸಂಗ್ರಹಣಾ ಘಟಕವನ್ನು ಮಾಜಿ ಶಾಸಕ ಸಂಜೀವ ಮಟಂದೂರು ಚಾಲನೆ ನೀಡಿ, ಸ್ವಚ್ಛತೆಗೆ ಪುತ್ತೂರು ನಗರಸಭೆ ಸಹಕಾರ ನೀಡುತ್ತಿರುವ ಬಗ್ಗೆ ಕೃತಜ್ಞತೆ ನೀಡಿದರು.
ಈ ಸಂದರ್ಭದಲ್ಲಿ ಪುತ್ತೂರು ನಗರಸಭೆ ಅಧಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆ, ಸ್ಥಾಯಿ ಸಮಿತಿಯ ಅಧ್ಯಕ್ಷ ಸುಂದರ್ ಪೂಜಾರಿ ಬಡಾವು, ಸದಸ್ಯರಾದ ರಮೇಶ್ ರೈ, ರೋಬಿನ್, ಯುಸೋಫ್, ಮಾಜಿ ನಗರಸಭಾ ಸದಸ್ಯರಾದ ಮುಖೇಶ್, ನಗರಸಭೆಯ ಪೌರಯುಕ್ತರು ಮಧು ಎಸ್. ಮನೋಹರ್, ನಗರಸಭೆ ಹಿರಿಯ ಅರೋಗ್ಯ ನಿರೀಕ್ಷಕಿ ಶ್ವೇತಾಕಿರಣ್, ಬಸ್ ನಿಲ್ದಾಣದ ವ್ಯವಸ್ಥಾಪಕ ಸುಬ್ರಮಣ್ಯ, ಬಸ್ ನಿಲ್ದಾಣದ ಸಿಬ್ಬಂದಿಗಳು, ಸಾಹಸ ಸಂಸ್ಥೆಯ ಸಹಾಯಕ ಯೋಜನಾ ಸಂಯೋಜಕರು ಅನಂತ ದೇಶಭಂಡಾರಿ, ಮೇಲ್ವಿಚಾರಕ ಸಿದ್ದಪ್ಪ ವಡೇರ, ಹಾಗೂ ಗಣೇಶ್ ಉಪಸ್ಥಿತರಿದ್ದರು.