ಅಕ್ಷಯ  ಕಾಲೇಜಿನಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಮಾರೋಪ

ಪುತ್ತೂರು: ಅಕ್ಷಯ    ಕಾಲೇಜಿನಲ್ಲಿ   ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳನ್ನು  ಒಳಗೊಂಡ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ರ ಸಮಾರೋಪ ಸಮಾರಂಭದ  ಉದ್ಘಾಟನೆ ಯನ್ನು  ಶ್ರೀ  ಅರುಣ್ ನಾಗೇ ಗೌಡ  ಡಿ.ವೈ.ಎಸ್. ಪಿ  ಪುತ್ತೂರು  ವಿಭಾಗ  ಇವರು  ನಿರ್ವಹಿಸಿ  ವಿದ್ಯಾರ್ಥಿ ಜೀವನದ ಕರ್ತವ್ಯ ವನ್ನು ಸಮರ್ಪಕವಾಗಿ  ನಿಭಾಯಿಸಿ ತಮ್ಮ  ಪೋಷಕರಿಗೆ, ತಮಗೆ  ಶಿಕ್ಷಣ ನೀಡಿದ ಸಂಸ್ಥೆಗೆ ಕೀರ್ತಿಯನ್ನು ತರಬೇಕು. ಕಲಿಕೆ ಮತ್ತು ಕ್ರಮ ಬದ್ಧವಾದ  ಜೀವನ ಉತ್ತಮ ಸಂಸ್ಕಾರವನ್ನು ಕಲಿಸುತ್ತದೆ  ಮಾತ್ರವಲ್ಲ  ಸಮಾಜದಲ್ಲಿ ಉನ್ನತ ಸ್ಥಾನವನ್ನು  ತಲುಪಲು ಪ್ರೇರೇಪಿಸುತ್ತದೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡೈಜಿ  ವರ್ಲ್ಡ್  ಮೀಡಿಯಾ  ವಾಲ್ಟರ್ ಸಂಸ್ಥಾಪಕರು  ನಂದಲಿಕೆ  ಮಾತನಾಡಿ,  ವಿದ್ಯಾರ್ಥಿಯ  ಜೀವನದಲ್ಲಿ ಅಂಕ ಗಳಿಕೆ  ಮತ್ತು  ಸರ್ಟಿಫಿಕೇಟ್  ಗಿಂತಲೂ  ತಾವು  ಉತ್ಸಾಹಿಯಾಗಿ ಯಾವ  ವಲಯಗಳಲ್ಲಿ  ತಮ್ಮ ಇಚ್ಛೆಗೆ ಅನುಸಾರವಾಗಿ ತಮ್ಮನ್ನು ತಾವು  ಹೇಗೆ ಧನಾತ್ಮಕ ವಾಗಿ ತೊಡಗಿಸಿಕೊಂಡಿದ್ದೀರಿ  ಎಂಬುದು  ಮುಖ್ಯ.  ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು  ಸಾಧಿಸುವ ಛಲ ಹೊಂದಿರಬೇಕು ಎಂದು ವಿದ್ಯಾರ್ಥಿ ಗಳಿಗೆ ಪ್ರೇರೇಪಿಸಿದರು. 

ಕಾರ್ಯಕ್ರಮದಲ್ಲಿ  ಅತಿಥಿಯಾಗಿ ಭಾಗವಹಿಸಿದ ಗಾಯಕಿ ಜೀ  ಕನ್ನಡ ಸ. ರೀ  ಗ. ಮ.ಪ 2020 ನೇ  ಆವೃತ್ತಿ ಕುಮಾರಿ ಸಮನ್ವಿ ರೈ  ಮಾತನಾಡಿ,   ವಿದ್ಯಾರ್ಥಿಗಳಿಗೆ ತಮ್ಮ  ಜೀವನದ  ಯಶಸ್ಸಿನ   ಹಾದಿಯನ್ನು  ತಿಳಿಸಿ  “ಮರಳಿ ಯತ್ನವ ಮಾಡು,  ಗುರಿ  ತಲುಪುವ ತನಕ”  ಸತತ  ಪ್ರಯತ್ನವು  ಫಲ ವನ್ನು ನೀಡುತ್ತದೆ ಎಂದು  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 































 
 

ಅತಿಥಿಯಾಗಿ ಭಾಗವಹಿಸಿದ ತುಳು ಮತ್ತು ಕನ್ನಡ ನಿರ್ದೇಶಕ ಮತ್ತು  ನಟ ರಾಹುಲ್ ಅಮೀನ್ ಯುವ ಜನತೆ ದೇಶದ  ಸಂಪತ್ತು ಮತ್ತು  ಭವಿಷ್ಯ.  ಈ  ನಿಟ್ಟಿನಲ್ಲಿ  ಕರ್ತವ್ಯ ಪ್ರಜ್ಞೆಯಿಂದ , ಸಮಯ ಪ್ರಜ್ಞೆಯಿಂದ  ಜೀವನದ ಪ್ರತಿ  ಹೆಜ್ಜೆ ಆನಂದಮಯವಾಗಿರಬೇಕು ಮತ್ತು ಸಮಾಜಕ್ಕೆ ಆಸರೆಯಾಗಿರಬೇಕು  ಯುವ ಜನತೆಗೆ ಸ್ಫೂರ್ತಿ ನೀಡಿದರು. 

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಅಧ್ಯಕ್ಷರಾದ  ಜಯಂತ್  ನಡುಬೈಲ್  ಮಾತನಾಡಿ ಕಾರ್ಯಕ್ರಮದಲ್ಲಿ  ವಿವಿಧ ವಲಯಗಳಲ್ಲಿ  ಸಾಧನೆಯನ್ನು  ಮಾಡಿದ ವ್ಯಕ್ತಿಗಳನ್ನು  ಆಹ್ವಾನಿಸುವ  ಮುಖ್ಯ ಉದ್ದೇಶ  ವಿದ್ಯಾರ್ಥಿಗಳಿಗೆ  ಪ್ರೇರಣೆಯಾಗಲಿ, ಸಾಧಕರ  ನಡೆದು ಬಂದ ದಾರಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್, ಪ್ರಾಂಶುಪಾಲರಾದ ಸಂಪತ್ ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ. ಎ, ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ಸಂಚಾಲಕರಾದ  ಹರಿಶ್ಚಂದ್ರ ಮತ್ತು  ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ  ಜೀವನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕುಮಾರಿ ಪ್ರಕೃತಿ ಮತ್ತು ಬಳಗದವರು ಪ್ರಾರ್ಥಿಸಿದರು.  ಸಾಂಸ್ಕೃತಿಕ ಸ್ಪರ್ಧೆ “ಕೃತ್ವ 2025” ರ ಸಂಯೋಜಕರಾಗಿರುವ ಶ್ರುತರವರು ಸ್ವಾಗತಿಸಿ, ಶ್ರೀ ಗಂಧರ್ವ ವಂದಿಸಿದರು.  ಕಾರ್ಯಕ್ರಮವನ್ನು ಸಹ ಖಜಾಂಜಿ ಕುಮಾರಿ ಟೀನಾ ನಿರೂಪಿಸಿದರು.

ಸಾಂಸ್ಕೃತಿಕ ಸ್ಪರ್ಧೆಕೃತ್ವ 2025”ರಲ್ಲಿ ಸುಮಾರು 20 ಕಾಲೇಜುಗಳು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜು, ಸುಳ್ಯ, ದ್ವಿತೀಯ ಸ್ಥಾನವನ್ನು ತ್ರಿಷಾ ಕಾಲೇಜು ಕಟಪಾಡಿ, ಉಡುಪಿ, ತೃತೀಯ ಸ್ಥಾನವನ್ನು ವಿವೇಕಾನಂದ ಬಿ.ಇಡಿ ಕಾಲೇಜು,  ಪುತ್ತೂರು ಪಡೆದುಕೊಂಡರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top