ಪುತ್ತೂರು: ಲಕ್ಷಾಂತರ ಮಂದಿ ಸೇರುವ, ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆಯ ಸಂದರ್ಭದಲ್ಲಿ ಜಾತ್ರೆ ಗದ್ದೆಯಲ್ಲಿ ಪೊಲೀಸ್ ಬಂದೋಬಸ್ತ್ ಜೊತೆಗೆ ಮೊಬೈಲ್ ಸಿಸಿ ಕ್ಯಾಮರಾ ಕಣ್ಗಾವಲು ಕೂಡಾ ಇರಲಿದೆ.
ಈಗಾಗಲೇ 44 ಸಿಸಿಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯಿಂದ ಸಿಸಿ ಕ್ಯಾಮರಾ ಅಳವಡಿಕೆ ಮತ್ತು ನಿರ್ವಹಣೆ ನಡೆಯುತ್ತಿದೆ.
ಭದ್ರತೆಗೆ ಹೆಚ್ಚು ಅನುಕೂಲಕರವಾಗುವ ಚಲಿಸುವ ವಾಹನದಲ್ಲಿ ಸಿಸಿ ಟಿವಿ (CC TV Control Room on Wheels) ಎಂಬ ಹೊಸ ಪ್ರಯೋಗವನ್ನು ದಕ್ಷಿಣ ಕನ್ನಡ ಜಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯು ನಿರ್ವಹಣೆ ಮಾಡುತ್ತದೆ ಎಂದು ಸಂಸ್ಥೆಯ ಮಾಲಕರಾದ ರೂಪೇಶ್ ಶೇಟ್ ಅವರು ತಿಳಿಸಿದ್ದಾರೆ.