ಪುತ್ತೂರು: ಪ್ರತಿಷ್ಠಿತ ಪ್ರೇರಣಾ ಸಂಸ್ಥೆ ಹಾಗೂ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೆಲ್ಲಿಕಟ್ಟೆಯಲ್ಲಿರುವ ಒಕ್ಕಲಿಗ ಸೌಧದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ “ಪ್ರೇರಣಾ ಸಮ್ಮರ್ ಕ್ಯಾಂಪ್-2025” ಇದರ ಸಮಾರೋಪ ಸಮಾರಂಭ ಇಂದು ಖಾಸಗಿ ಬಸ್ ನಿಲ್ದಾಣದ ಎದುರಿನ ಒಕ್ಕಲಿಗ ಸೌಧದಲ್ಲಿ ನಡೆಯಿತು.

ನಮ್ಮನ್ನು ನಾವು ಅರಿತುಕೊಳ್ಳಲು ಶಿಬಿರ ಪೂರಕ ವಾತಾವರಣ ಕಲ್ಪಿಸುತ್ತದೆ : ವಚನಾ ಪ್ರದೀಪ್
ಮುಖ್ಯ ಅತಿಥಿಯಾಗಿ ಪುತ್ತೂರು ಅದಿವ ಸಂಸ್ಥೆಯ ಪಾಲುದಾರರಾದ ವಚನಾ ಪ್ರದೀಪ್ ಮಾತನಾಡಿ ನಮ್ಮ ಬಗ್ಗೆ ನಾವು ಅರಿತುಕೊಳ್ಳಲು ಮಕ್ಕಳಿಗೆ ಶಿಬಿರ ಪೂರಕ ವಾತಾವರಣ ಉಂಟು ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರೇರಣಾ ಸಂಸ್ಥೆ ಹಮ್ಮಿಕೊಂಡ ಬೇಸಿಗೆ ಶಿಬಿರ ಮಕ್ಕಳಲ್ಲಿರು ಸುಪ್ತ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸಿಕೊಟ್ಟಿದೆ. ಶಿಬಿರದಲ್ಲಿ ಮಕ್ಕಳಿಗೆ ಪೂರಕವಾದ ಚಟುವಟಿಕೆಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಪ್ರೇರಣಾ ಬೇಸಿಗೆ ಶಿಬಿರ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ : ಡಿ.ವಿ.ಮನೋಹರ್
ಇನ್ನೋರ್ವ ಮುಖ್ಯ ಅತಿಥಿ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಡಿ.ವಿ. ಮನೋಹರ್ ಮಾತನಾಡಿ ಪ್ರೇರಣಾ ಶಿಬಿರದಲ್ಲಿ ಮಕ್ಕಳು ಒಂದೇ ಕುಟುಂಬ ಎಂಬಂತೆ ವರ್ತಿಸಲು ಪ್ರೇರಣೆ ನೀಡಿದೆ. ಮಕ್ಕಳಿಗೆ ಮನಮುಟ್ಟುವಂತೆ ವಿವಿಧ ಚಟುವಟಿಕೆಗಳ ಕುರಿತು ತರಬೇತಿ ನೀಡಿದ ಶಿಬಿರದಿಂದ ಮಕ್ಕಳಿಗೆ ಮುಂದಿನ ಜೀವನ ಪರಿವರ್ತನೆ ತರಲಿ. ಪ್ರೇರಣಾ ಶಿಬಿರದಿಂದ ಭಿನ್ನ ರೀತಿಯ ಚಟುವಟಿಕೆಗಳ ಕುರಿತು ತರಬೇತಿ ನೀಡಿದ್ದು, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಒಳ್ಳೆಯ ಕಾರ್ಯಕ್ರಮ ನೀಡಲಿ ಎಂದರು.
ಪ್ರೇರಣಾ ಬೇಸಿಗೆ ಶಿಬಿರ ಮಕ್ಕಳಿಗೆ ಉತ್ತಮ ಚಟುವಟಿಕೆಗಳಿಗೆ ಪ್ರೇರಣೆ ನೀಡಿದೆ : ಉಲ್ಲಾಸ ಪೈ
ತರಬೇತುದಾರ, ಮಕ್ಕಳ ಸಾಹಿತಿ ಉಲ್ಲಾಸ ಪೈ ಮಾತನಾಡಿ ಮಕ್ಕಳು ದೇವರಿಗೆ ಸಮಾನ. ಹಾಗೆಯೇ ದೇವರ ಅನುಗ್ರಹ ಇದ್ದರೆ ಎಲ್ಲವೂ ಸಿಗುತ್ತದೆ. ಪ್ರೇರಣಾ ಬೇಸಿಗೆ ಶಿಬಿರ ಮಕ್ಕಳಿಗೆ ಪ್ರೇರಣೆ ನೀಡುವಲ್ಲಿ ಕಾರ್ಯಪ್ರವೃತ್ತವಾದದ್ಧಕ್ಕೆ ಧನ್ಯವಾದ ಸಲ್ಲಿಸಿದರು.
ಮಕ್ಕಳಲ್ಲಿನ ಸುಪ್ತ ಪ್ರತಿಭೆ ಹೊರ ಹಾಕಲು ಶಿಬಿರದ ಪಾತ್ರ ಬಹುಮುಖ್ಯ : ಕೆ.ರಾಜೇಂದ್ರ ಪ್ರಸಾದ್‍ಶೆಟ್ಟಿ,
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ಮಾತನಾಡಿ ಮಕ್ಕಳಲ್ಲಿ ಸುಪ್ತ ಪ್ರತಿಭೆ ಹೊರಹಾಕಲು ಶಿಬಿರಗಳ ಪಾತ್ರ ಬಹುಮುಖ್ಯ. ಹಾಗೆಯೇ ಶಿಬಿರ ಯಶಸ್ವಿಯಾಗಲು ಮಕ್ಕಳ ಹೆತ್ತವರ ಪಾತ್ರವೂ ಇದೆ. ಇದೀಗ ಪ್ರೇರಣಾ ಸಂಸ್ಥೆಯಿಂದ ನಡೆದ ಪ್ರೇರಣಾ ಬೇಸಿಗೆ ಶಿಬಿರ ಮಕ್ಕಳಲ್ಲಿಯ ಸುಪ್ತ ಪ್ರತಿಭೆಯನ್ನು ಹೊರಹಾಕಲು ವೇದಿಕೆ ಕಲ್ಪಿಸಿಕೊಟ್ಟಿದೆ ಎಂದ ಅವರು ವೇದಿಕೆಯಲ್ಲಿ ನಿಂತು ಮಾತನಾಡುವ ಭಯ ಹೋಗಲಾಡಿಸಲು ಮಕ್ಕಳು ಶಿಬಿರದಲ್ಲಿ ಪಾಲ್ಗೊಳ್ಳಬೇಕು. ಭಯ ಹೋಗಲಾಡಿಸಲು ಇದು ಪೂರಕ ವಾತಾವರಣ ನಿರ್ಮಿಸುತ್ತದೆ. ಸಮರ್ಪಣಾ ಟ್ರಸ್ಟ್ ಒಳ್ಳೆಯ ಧ್ಯೇಯೋದ್ದೇಶಗಳನ್ನಿಟ್ಟು ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದರು. ಟ್ರಸ್ಟ್ ನಿರ್ದೇಶಕ, ನ್ಯೂಸ್ ಪುತ್ತೂರು ಅಧ್ಯಕ್ಷ ಸೀತಾರಾಮ ಕೇವಳ ಐದು ದಿನಗಳ ಕಾಲ ನಡೆದ ಶಿಬಿರದ ರೂಪುರೇಷೆಗಳನ್ನು ಸವಿವರವಾಗಿ ತಿಳಿಸಿದರು.
ವೇದಿಕೆಯಲ್ಲಿ ಟ್ರಸ್ಟ್ ನ ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಸುಶಾಂತ್ ಕೆಡೆಂಜಿ, ಕಾರ್ಯನಿರ್ವಾಹಕ ನಿರ್ದೇಶಕಿ ಮೋಕ್ಷಿತಾ ಮಿಥುನ್ ಉಪಸ್ಥಿತರಿದ್ದರು. ನಿರ್ದೇಶಕ ವಸಂತ ವೀರಮಂಗಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆಯನ್ನು ನಡೆಸಿಕೊಟ್ಟರು. ನಿರ್ದೇಶಕ ನಾಗೇಶ್ ಕೆಡೆಂಜಿ ಸ್ವಾಗತಿಸಿದರು. ಆಡಳಿತ ನಿರ್ದೇಶಕ ಮುರಳೀಧರ ಕೆ.ಎಲ್. ವಂದಿಸಿದರು. ಶಿಬಿರದಲ್ಲಿ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಶಿಬಿರದಲ್ಲಿ 30 ಮಕ್ಕಳು ಪಾಲ್ಗೊಂಡಿದ್ದು, ಪಾಲ್ಗೊಂಡ ಶಿಬಿರಾರ್ಥಿಗಳು ಕಲಿತ ವಿಷಯಗಳನ್ನು ಮುಂದಿಟ್ಟರು.
ಶಿಬಿರದಲ್ಲಿ ಪಾಲ್ಗೊಂಡು ಮಕ್ಕಳು
ದಿಶಾ ಬಿ. (ಬಲ್ನಾಡು), ವಿಹಾನ್ ಕುಂಟ್ಯಾಣ (ಜ್ಞಾನಗಂಗಾ), ಅಭಿನವ್ (ಸಾಂದೀಪನಿ), ನಿಹಾಲ್ ಎನ್. ಕೆಡೆಂಜಿ (ಸಾಂದೀಪನಿ), ಸಾನ್ವಿ ಎನ್. ಕೆಡೆಂಜಿ (ಸಾಂದೀಪನಿ), ಜ್ಯೇಷ್ಠ ವಿ. ಕೆಡೆಂಜಿ (ಸಾಂದೀಪನಿ), ನಿಶಾನಿ ವಿ. ಕೆಡೆಂಜಿ (ಸಾಂದೀಪನಿ), ನೈನಿಕ ಎ.ಆರ್. (ಅಂಬಿಕಾ), ಅನಿಶ್ ಎಂ.ಎಚ್. (ಸುದಾನ), ಜಶ್ಮಿತ್ ಕೃಷ್ಣ (ಇಂದ್ರಪ್ರಸ್ಥ), ಜನನಿ ಎಂ.ಡಿ. ಮೆದು (ವಿದ್ಯಾರಶ್ಮಿ), ಚಿನ್ಮಯಿ ಎಂ.ಡಿ. ಮೆದು(ವಿದ್ಯಾರಶ್ಮಿ), ಚರಿತಾ ಎಂ.ಡಿ. ಮೆದು (ವಿದ್ಯಾರಶ್ಮಿ), ಆಯುಷ್ ಎ. (ಜ್ಞಾನಗಂಗಾ), ಸಾತ್ಯಕಿ ಎಂ. ಹೆಬ್ಬಾರ್ ಶಾಂತಿಗೋಡು (ವಿವೇಕಾನಂದ), ಗಾನ್ವಿ ಕೆ.ಎಸ್. (ವಿವೇಕಾನಂದ), ರಿತ್ವಿಕಾ (ವಿವೇಕಾನಂದ), ಹಿತಾನ್ (ವಿವೇಕಾನಂದ), ಜಿತನ್ (ವಿವೇಕಾನಂದ), ಅದಿಶ್ ಎಂ.ಎಚ್. (ಸುದಾನ), ವಿಹಾನಿ ತೇಜ ವೀರಮಂಗಲ (ಸೈಂಟ್ ವಿಕ್ಟರ್ಸ್), ಐಶಾನಿ ವೀರಮಂಗಲ (ಸೈಂಟ್ ವಿಕ್ಟರ್ಸ್), ಮೋಕ್ಷಿತ್ (ಕೊಣಾಲು), ದುತಿ ಮುರಳೀಧರ್ (ಬೊಳುವಾರು), ತವಿನ್ ಎಸ್. (ವಿವೇಕಾನಂದ), ಸಂಹಿತ್ (ವಿವೇಕಾನಂದ), ತನ್ಮಯೀ (ವಿವೇಕಾನಂದ), ಕೌಶಿಕ್ (ವಿವೇಕಾನಂದ), ಖ್ಯಾತಿ (ವಿವೇಕಾನಂದ), ಯುವನ್ (ವಿಟ್ಲ(