ಬನ್ನೂರು: ಕೃಷ್ಣ ನಗರ ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏ.14 ರಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಜಿಲ್ಲಾ ದಸ್ತಾವೇಜು ಬರಹಗಾರರಾದ ಬಾಲಚಂದ್ರ ಸೊರಕೆಯವರು ದೀಪ ಬೆಳಗಿಸಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಬಳಿಕ ಮಾತನಾಡುತ್ತಾ ಅಂಬೇಡ್ಕರ್ ಅವರ ಜೀವನ ಮೌಲ್ಯಗಳನ್ನು ಮತ್ತು ಸಂವಿಧಾನದ ರೂಪುರೇಷೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಸಮಾನ ನಾಗರಿಕ ಸಂಹಿತೆ ಜಾರಿಯಾಗದ ಹೊರತು ಎಲ್ಲರಲ್ಲೂ ಸಮಾನ ಮನೋಭಾವ ಬೆಳೆಯಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾನರು ಎಂಬ ಭಾವನೆ ಎಲ್ಲರ ಮನಸ್ಸಿನಲ್ಲಿ ಜಾಗೃತವಾಗುವುದು ಇಂದಿನ ಅನಿವಾರ್ಯತೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾಡಳಿತ ಸಮಿತಿಯ ಅಧ್ಯಕ್ಷರಾದ ವೆಂಕಟರಮಣ ಗೌಡ ಕಳುವಾಜೆ ರವರು ಮಾತನಾಡಿ ನಾವು ನಮ್ಮನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಎಲ್ಲಾ ಧರ್ಮವನ್ನು ಗೌರವಿಸುವುದು ಅಲ್ಲದೆ ಸಂವಿಧಾನದ ಮೌಲ್ಯಗಳನ್ನು ಪಾಲಿಸುತ್ತಾ ಪ್ರತಿಯೊಂದನ್ನು ಗೌರವಿಸಿ ಅದರ ಶ್ರೇಷ್ಠತೆಯನ್ನು ಹೆಚ್ಚಿಸಿ ದೇಶದ ಬಗ್ಗೆ ಹಿತ ಚಿಂತನೆಯನ್ನು ಮಾಡುವವರಾಗಬೇಕು. ಸಮಾನ ನಾಗರಿಕ ಸಂಹಿತೆಯ ಮೂಲಕ ನಾವೆಲ್ಲರೂ ಒಂದೇ ಭಾವನೆ ನಮ್ಮಲ್ಲಿ ಮೂಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುಟಾಣಿ ಮಕ್ಕಳಾದ ಯತ್ನ, ಆಧ್ಯ ಭಟ್, ಚಾರ್ಜಿನ, ಗೀತಿಶಾ ಪ್ರಾರ್ಥಿಸಿದರು. ಶಾಲಾ ಪ್ರಾಂಶುಪಾಲರಾದ ಅಮರನಾಥ ರವರು ಸ್ವಾಗತಿದರು. ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿಯಾದ ಶ್ರೀಯುತ ಗುಡ್ಡಪ್ಪ ಗೌಡ ಬಲ್ಯ, ಶಾಲೆಯ ಸಂಚಾಲಕರಾದ ಶ್ರೀ ಎ. ವಿ. ನಾರಾಯಣ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕಿಯಾದ ಯಶುಭ ರೈ ವಂದಿಸಿ, ಶಾಲಾ ಶಿಕ್ಷಕಿ ಸವಿತಾ ನಿರೂಪಿಸಿದರು.