ಅಡ್ಕ ಸ್ಥಳ ಶ್ರೀ ರಾಮ್ ಭಟ್ ರವರ ಮನೆಯ ಆವರಣದಲ್ಲಿ ಭಾಗ್ಯಶ್ರೀ ಸಂಘದ 1001ನೇ ವಾರದ ಸಭೆ ಹಾಗೂ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷರಾದ ಪುಷ್ಪಾಕರ ರೈ ಹಾಗೂ ಯೋಜನಾಧಿಕಾರಿ ರಮೇಶ್ ರವರು ವಿಧಿವತ್ತಾಗಿ ಏ.11 ರಂದು ಉದ್ಘಾಟಿಸಿ ಯೋಜನೆಯ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿ ನೀಡಿದರು.
ಸಂಘದ ಸದಸ್ಯರಾದ ರೇವತಿಯವರು ತಮ್ಮ ಸಂಘದ ಸಾಧನೆಯನ್ನು ವಿವರಿಸುತ್ತಾ ಸದ್ರಿ ಸಂಘ 18.05 2006 ರಂದು ಆರಂಭಗೊಂಡು ಈ ತನಕ ಸಂಘದ ಉಳಿತಾಯ 179660 ಮಾಡಿ 6075000 ಪ್ರತಿನಿಧಿ ವಿನಿಯೋಗ ವಾಗಿದ್ದು, 1550571 ರೂಪಾಯಿ ಸಾಲ ಚಾಲ್ತಿಯಲ್ಲಿದೆ ಎಂದು ವಿವರಿಸುತ್ತಾ, ಸಂಘದ ಸಭೆ ವಾರ, ವಾರ ನಡೆಸಿದ್ದರಿಂದ ಸದಸ್ಯರ ಸಭಾ ಕಂಪನ ದೂರವಾಗಿದ್ದು ತುಂಬಾ ಪ್ರಯೋಜನವಾಗಿದ್ದು ಯೋಜನೆಯ ಪ್ರತಿಯೊಂದು ಕಾರ್ಯಕ್ರಮದಲ್ಲೂ ಭಾಗವೈಸಿತಿರುವುದಾಗಿ ತಿಳಿಸಿದರು,
ಈ ಕಾರ್ಯಕ್ರಮದಲ್ಲಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ ವಲಯ ಮೇಲ್ವಿಚಾರಕರಾದ ಜಗದೀಶ್ ಪೂಜಾರಿ, ಪದಾಧಿಕಾರಿಗಳಾದ ಮಹಾಲಿಂಗ ಗಾಣಿಗ, ಮುಖ್ಯ ಅತಿಥಿಗಳಾಗಿ ಶಿಕ್ಷಕರಾದ ಐತಪ್ಪ ನಾಯ್ಕ, ಶಿಕ್ಷಕರಾದ ವಿಠ್ಠಲ ಜಿ.ಪಂಚಾಯತ್ ಸದಸ್ಯರಾದ ಜಯಶ್ರೀ ಕುಲಾಲ್ ಉಪಸ್ಥಿತರಿದ್ದು, ರೇವತಿ ವಂದಿಸಿ, ವಾಣಿ ಸ್ವಾಗತಿಸಿ, ದೇವಕಿ ಆರ್ ಭಟ್ ಕಾರ್ಯಕ್ರಮ ನಿರೂಪಿಸಿದರು.