ಪರಿಶಿಷ್ಟರೆ ರಾಜ್ಯದಲ್ಲಿ ನಂಬರ್‌ ಒನ್‌ : ಜಾತಿ ಗಣತಿ ವರದಿಯಲ್ಲಿ ಬಹಿರಂಗ

ಹಲವು ಜಾತಿಗಳ ಮೀಸಲಾತಿ ಪ್ರಮಾಣ ಹೆಚ್ಚಿಸಲು ಶಿಫಾರಸ್ಸು

ಬೆಂಗಳೂರು: ತೀವ್ರ ಚರ್ಚೆಗೆ ಕಾರಣವಾಗಿರುವ ಸಿದ್ದರಾಮಯ್ಯ ಸರಕಾರದ ಜಾತಿ ಗಣತಿ ವರದಿ ಅಧಿಕೃತವಾಗಿ ಇನ್ನೂ ಬಹಿರಂಗವಾದಿದ್ದರೂ ಅದರಲ್ಲಿರುವ ಕೆಲವು ಮಾಹಿತಿಗಳು ಸೋರಿಕೆಯಾಗಿವೆ. ವರದಿ ಪ್ರಕಾರ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಸೇರಿದವರು ಅತಿಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಹಲವು ಚರ್ಚೆ, ವಿರೋಧದ ನಡುವೆ ಸಚಿವ ಸಂಪುಟದಲ್ಲಿ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ಮಂಡನೆ ಆಗಿದೆ. ಸಮಗ್ರ ಚರ್ಚೆಗೆ ಮುಂದಿನ ಗುರುವಾರದ ಸಚಿವ ಸಂಪುಟ ಸಭೆಯ ಮುಹೂರ್ತ ನಿಗದಿ ಮಾಡಲಾಗಿದೆ.ಈ ಮಧ್ಯೆ ಜಾತಿ ಗಣತಿ ವರದಿಯ ಅಂಕಿಅಂಶ ಬಹಿರಂಗವಾಗಿದೆ. ಈ ಸಮೀಕ್ಷೆಗೆ ಒಟ್ಟು 5 ಕೋಟಿ 98 ಲಕ್ಷ 14 ಸಾವಿರದ 942 ಜನರು ಒಳಪಟ್ಟಿದ್ದಾರೆ.
ಸಮೀಕ್ಷೆಯ ಪ್ರಕಾರ ರಾಜ್ಯದ ಒಟ್ಟಾರೆ ಜನಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮೊದಲ ಸ್ಥಾನದಲ್ಲಿದೆ. ಎರಡನೆಯ ಸ್ಥಾನದಲ್ಲಿ ಲಿಂಗಾಯತರು, ಮೂರನೇ ಸ್ಥಾನದಲ್ಲಿ ಇತರ ಹಿಂದುಳಿದ ವರ್ಗ (ಒಬಿಸಿ) ಹಾಗೂ ನಾಲ್ಕನೆಯ ಸ್ಥಾನದಲ್ಲಿ ಮುಸ್ಲಿಮರು, ಐದನೆಯ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆಂದು ತಿಳಿದಬಂದಿದೆ.
ಪರಿಶಿಷ್ಟ ಜಾತಿಯ ಜನಸಂಖ್ಯೆ 1,09,29,347 ಆಗಿದ್ದು, ಪ್ರವರ್ಗ 3ಬಿಯಲ್ಲಿ ಬರುವ ವೀರಶೈವ ಲಿಂಗಾಯತರ ಜನಸಂಖ್ಯೆ 81, 37,536 ಇದೆ. ಪ್ರವರ್ಗ 2ಎಯಲ್ಲಿ ಬರುವ ಇತರ ಹಿಂದುಳಿದ ವರ್ಗಗಳ ಜನಸಂಖ್ಯೆ 77,78,209 ರಷ್ಟಿದೆ. ನಾಲ್ಕನೇ ಸ್ಥಾನದಲ್ಲಿ ಪ್ರವರ್ಗ 2ಬಿಯಲ್ಲಿ ಬರುವ ಮುಸ್ಲಿಂ ಜನಸಂಖ್ಯೆ 75,25,880 ಇದೆ. ಪ್ರವರ್ಗ 3ಎಯಲ್ಲಿ ಬರುವ ಒಕ್ಕಲಿಗರು 72,99,577ರಷ್ಟಿದ್ದಾರೆ.
ವರದಿಯಲ್ಲಿ ಪ್ರವರ್ಗ 1ರಲ್ಲಿ ಬರುವ ಉಪ್ಪಾರ, ಗೊಲ್ಲ, ಗಂಗಾಮತಸ್ಥ ಸೇರಿ 99 ಜಾತಿಗಳನ್ನು ಪ್ರವರ್ಗ 1ಎ ಹಾಗೂ 1ಬಿ ಅಡಿ ವರ್ಗೀಕರಿಸಲಾಗಿದೆ. ಆ ಪ್ರಕಾರ ಪ್ರವರ್ಗ 1ಎ ಅಡಿ 34,69,638 ಇದ್ದರೆ, ಪ್ರವರ್ಗ 1ಬಿ ಅಡಿ 73,92,313 ಜನಸಂಖ್ಯೆ ಇದೆ. ಪ್ರವರ್ಗ 1ಎ ಹಾಗೂ 1ಬಿ ಸೇರಿಸಿದರೆ 1,08, 88,951 ಜನಸಂಖ್ಯೆ ಹೊಂದಿದ್ದು, ಶೇ.13ರಷ್ಟು ಜನಸಂಖ್ಯೆ ಇದೆ. ಪ್ರವರ್ಗ 2ಎ ಹಾಗೂ 2ಬಿ ಸೇರಿ 1,53,04,089 ಜನಸಂಖ್ಯೆ ಇದೆ. ಪ್ರವರ್ಗ 3ಎ ಹಾಗೂ 3ಬಿ ಸೇರಿ ಒಟ್ಟು 1,54,37,113 ಜನಸಂಖ್ಯೆ ಹೊಂದಿವೆ.































 
 

ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ

ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗ ಸಮುದಾಯಗಳ ಹಿಂದುಳಿದಿರುವಿಕೆಯ ಸ್ಥಾನಮಾನವನ್ನು ಪರಿಗಣಿಸಿ, ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಪುನರ್‌ ರಚಿಸಲು ಶಿಫಾರಸು ಮಾಡಿದೆ.

  • ಮುಸ್ಲಿಂ ಸಮುದಾಯದ ಜನಸಂಖ್ಯೆ ಒಂದು ಜಾತಿಯಾಗಿ 75.27 ಲಕ್ಷ ಇದ್ದು, ಪರಿಶಿಷ್ಟ ಜಾತಿ ಹೊರತುಪಡಿಸಿದರೆ ಅತಿಹೆಚ್ಚು ಜನರಿರುವ ಏಕ ಜಾತಿಯಾಗಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲಿದ್ದಾರೆ. ಹಾಗಾಗಿ ಮೀಸಲು ಪ್ರಮಾಣವನ್ನು ಶೇ.8ಕ್ಕೆ ಹೆಚ್ಚಿಸಬೇಕು.
  • ಪ್ರಬಲ ಜಾತಿಗಳಲ್ಲಿ ಒಂದಾದ ಒಕ್ಕಲಿಗರು 61.50 ಲಕ್ಷ ಇದ್ದು, ಉಪಜಾತಿಗಳನ್ನು ಸೇರಿಸಿದರೆ ಜನಸಂಖ್ಯೆ 72 ಲಕ್ಷದಷ್ಟಾಗಿದೆ. ಹಾಗಾಗಿ, ಪ್ರವರ್ಗ 3(ಎ) ಪಟ್ಟಿಯಲ್ಲಿನ ಮೀಸಲು ಪ್ರಮಾಣವನ್ನು ಸದ್ಯದ ಶೇ.4ರಿಂದ ಶೇ.7ಕ್ಕೆ ಹೆಚ್ಚಿಸಬಹುದು.
  • ಪ್ರವರ್ಗ 3 (ಬಿ) ಪಟ್ಟಿಯಲ್ಲಿನ ಲಿಂಗಾಯತರ ಜನಸಂಖ್ಯೆ 66 ಲಕ್ಷ ಇದ್ದು, ಉಪಜಾತಿಗಳು ಸೇರಿದಂತೆ ಜನಸಂಖ್ಯೆ 81 ಲಕ್ಷ ಆಗುತ್ತದೆ. ಹಾಗಾಗಿ, ಜನಸಂಖ್ಯೆಗೆ ಅನುಗುಣವಾಗಿ ಈ ವರ್ಗದ ಮೀಸಲನ್ನು ಸದ್ಯದ ಶೇ.5 ರಿಂದ ಶೇ.8ಕ್ಕೆ ಹೆಚ್ಚಳ ಮಾಡಬೇಕು.
  • ವೃತ್ತಿ ಮತ್ತು ಸಾಮಾಜಿಕ ಪರಿಸ್ಥಿತಿಗೆ ಅನುಗುಣವಾಗಿ ಪ್ರವರ್ಗ-1ರಲ್ಲಿಸೇರಿರುವ ಜಾತಿಗಳಿಗೆ ಮೀಸಲನ್ನು ಶೇ.4ರಿಂದ ಶೇ.6ಕ್ಕೆ ಹೆಚ್ಚಿಸಬೇಕು. ಪ್ರವರ್ಗ 2(ಎ) ಜಾತಿಗಳನ್ನು ಮರುವರ್ಗೀಕರಣ ಮಾಡಬೇಕು ಮತ್ತು ಸದ್ಯದ ಶೇ.15ರಿಂದ ಶೇ.22ಕ್ಕೆ ಹೆಚ್ಚಿಸಬೇಕು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top