ಪುತ್ತೂರು: ಗುರು ಹಿರಿಯರ ಸಂಸ್ಮರಣೆಯ ಮೂಲಕ ಸಾಧಕರನ್ನು ಗೌರವಿಸುವ ಕಾರ್ಯವು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತದೆ ಎಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠoದೂರು ತಿಳಿಸಿದರು.
ಪುತ್ತೂರು ಪರ್ಲಡ್ಕ ಅಗಸ್ತ್ಯ ನಿವಾಸದಲ್ಲಿ ಬಾರ್ಯ ವಿಷ್ಣುಮೂರ್ತಿ ನೂರಿತ್ತಾಯ ಪ್ರತಿಷ್ಠಾನದ ವತಿಯಿಂದ ಜರಗಿದ 27ನೇ ವರ್ಷದ ಬಾರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪುತ್ತೂರು ಆದರ್ಶ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ವೈ ಸುಬ್ರಾಯ ಭಟ್ ಅವರಿಗೆ ಬಾರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಪ್ರೊ ವಿ. ಬಿ ಅರ್ತಿಕಜೆ ಮಾತನಾಡಿ, ನಿರಂತರವಾಗಿ ನಡೆಯುತ್ತಿರುವ ಈ ಕಾರ್ಯಕ್ರಮದಿಂದ ಸಾಧಕರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಪ್ರೇರಣೆ ನೀಡುತ್ತದೆ ಎಂದರು.
ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಕಯ್ಯೂರು ನಾರಾಯಣ ಭಟ್ ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ವೈದ್ಯ ಸುಬ್ರಾಯ ಭಟ್ ತನ್ನ ವೈದ್ಯಕೀಯ ವೃತ್ತಿಯ ಕೆಲವು ಘಟನೆಗಳನ್ನು ನೆನಪಿಸಿ ಕೊಂಡರು.
ಕಾರ್ಯಕ್ರಮದಲ್ಲಿ ಪುತ್ತೂರಿನ ಹೃದಯ ತಜ್ಞರಾದ ಡಾ. ಜೆ.ಸಿ ಅಡಿಗ, ಶುಭಾ ಅಡಿಗ, ಚಂದ್ರಶೇಖರ್ ಆಳ್ವ ಪಡುಮಲೆ, ಭವಾನಿ ಶಂಕರ ಶೆಟ್ಟಿ, ಲೋಕೇಶ್ ಹೆಗ್ಡೆ ಪುತ್ತೂರು, ಚುಂಚಲಾಕ್ಷಿ, ರಾಮಕೃಷ್ಣ ನಾಯಕ್ , ಸೀತಾರಾಮ ಶೆಟ್ಟಿ, ಪ್ರತ್ಯುಷ್ ಬಾರ್ಯ, ಪ್ರಜ್ಞಾ ಬಾರ್ಯ, ಡಾ. ಆದಿತ್ಯ ತಂತ್ರಿ, ಗುಂಡ್ಯಡ್ಕ ಈಶ್ವರ ಭಟ್, ಕೃಷ್ಣ ಭಟ್ಟ ಚೇಕೊಡು, ಕುಸುಮ. ಯಸ್ ಭಟ್, ಕೃಷ್ಣವೇಣಿ ಭಟ್, ಗೀತಾ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಬಾರ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಭಾಸ್ಕರ ಬಾರ್ಯ ಪ್ರಸ್ಥಾವನೆಯೊಂದಿಗೆ ಸ್ವಾಗತಿಸಿದರು. ಪ್ರತಿಷ್ಠಾನದ ಸದಸ್ಯ ದಿವಾಕರ ಆಚಾರ್ಯ ಗೇರುಕಟ್ಟೆ ವಿಷ್ಣುಮೂರ್ತಿ ನೂರಿತ್ತಾಯರ ಸಂಸ್ಕರಣೆ ಮಾಡಿದರು.