ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಶ್ರಾವ್ಯ ಎಚ್.ಬಿ. 2025ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಕಾಮರ್ಸ್ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ 9ನೇ ರಾಂಕ್ ಪಡೆಯುವ ಮೂಲಕ ಶತಮಾನ ಕಂಡ ಪದವಿ ಪೂರ್ವ ಕಾಲೇಜಿನ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ್ದಾರೆ.
ಬನ್ನೂರು ನಿವಾಸಿ ಹರಿಶ್ಚಂದ್ರ ಆಚಾರ್ಯ ಮತ್ತು ಶಾಂತಿ ದಂಪತಿ ಪುತ್ರಿಯಾಗಿರುವ ಶ್ರಾವ್ಯ ಬಿ.ಎಚ್. IT 100, ಇಂಗ್ಲಿಷ್ 95, ಲೆಕ್ಕಶಾಸ್ತ್ರ 97, ಅರ್ಥಶಾಸ್ತ್ರ 100, ವ್ಯವಹಾರ ಅಧ್ಯಯನ 99, ಸಂಖ್ಯಾಶಾಸ್ತ್ರ 100 ಅಂಕಗಳನ್ನು ಪಡೆದಿರುತ್ತಾರೆ.
ಒಟ್ಟು 600 ಅಂಕಗಳಲ್ಲಿ 591 ಅಂಕಗಳನ್ನು ಪಡೆದಿರುತ್ತಾರೆ.
























