ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಸ್ ಸಂಸ್ಥೆಯಲ್ಲಿ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ”

ಪುತ್ತೂರು: ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಸ್ ಸಂಸ್ಥೆಯು ಪುತ್ತೂರು, ಮೂಡಬಿದ್ರೆ. ಸುಳ್ಯ ಮತ್ತು ಕುಶಾಲನಗರದಲ್ಲಿರುವ ತಮ್ಮ ಶಾಖೆಗಳಲ್ಲಿ ವಾರ್ಷಿಕೋತ್ಸವದ ಸಂಭ್ರಮದ ಪ್ರಯುಕ್ತ ನೆಚ್ಚಿನ ಗ್ರಾಹಕರಿಗೆ ಜಿ.ಎಲ್. ಶಾಪಿಂಗ್ ಹಬ್ಬ “ವರುಷದ ಹರುಷ” ಎಂಬ ವಿಶಿಷ್ಟ ಶಾಪಿಂಗ್ ಹಬ್ಬವನ್ನು ಏ.10 ರಿಂದ ಆಯೋಜಿಸಲಾಗಿದೆ.

ಗ್ರಾಹಕರಿಗೆ ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂಗೆ ರೂ. 200 ರವರೆಗೆ ರಿಯಾಯಿತಿ ನೀಡಲಾಗುವುದು. ಅದೇ ರೀತಿ 25,000 ಹಾಗೂ ಅದಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಹಾಗೂ ಆಕರ್ಷಕ ಉಡುಗೊರೆಗಳನ್ನು ಪಡೆದುಕೊಳ್ಳುವ ಅವಕಾಶವಿದೆ.

ವಿವಿಧ ಬಗೆಯ ಚಿನ್ನಾಭರಣಗಳ ಅಮೋಘ ಸಂಗ್ರಹವಿದ್ದು, ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ಚಿನ್ನ ಹಾಗೂ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ಚಿನ್ನ ಹಾಗೂ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ.































 
 

ಪುರಾತನ ಆಭರಣಗಳ ವಿಭಾಗ “ಪ್ರಾಬಿಯಲ್ಲಿ ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಆ್ಯಂಟಿಕ್ ಚಿನ್ನಾಧರಣಗಳ ವಿವಿಧ ವಿನ್ಯಾಸಗಳು ಲಭ್ಯವಿದೆ. ನೂತನ ಆ್ಯಂಟಿಕ್ “ಪ್ರಾಪ್ ಎಲೈಟ್’ ವಿಭಾಗದಲ್ಲಿ ಅತ್ಯುತ್ತಮ ಕೆಲಸಗಾರಿಕೆ ಹಾಗೂ ಹೊಸ ವಿನ್ಯಾಸದಿಂದ ಕಣ್ಮನ ಸೆಳೆಯುವ ಲೈಟ್ ವೈಟ್ ಆಭರಣಗಳು ಲಭ್ಯವಿದೆ.

ಗೋ ವಜ್ರಾಭರಣ ವಿಭಾಗದಲ್ಲಿ ಸುಮಾರು 2000ಕ್ಕೂ ಮಿಕ್ಕಿದ ಡಿಸೈನ್ ಗಳ ಪುಜ್ವಲಿಸುವ ಅದ್ಭುತ ವಜ್ರಾಭರಣಗಳ ಸಂಗ್ರಹವಿದೆ. ಪಾರ್ಥ ಪುರುಷರ ಚಿನ್ನಾಭರಣಗಳ ವಿಭಾಗದಲ್ಲಿ ಪುರುಷರ ಕರ್ಟಿಯರ್ ಕಡ, ಲೇಸರ್ ಕಟ್ಟಿಂಗ್‍ ಕಡ, ಹೊಸ ವಿನ್ಯಾಸದ ಕ್ಯೂಬನ್ ಚೈನ್ಸ್‍, ಇಂಡೋ ಇಟಲಿಯನ್ ಚೈನ್ಸ್, ನವರತ್ನ ಉಂಗುರ, ವಿವಿಧ ವಿನ್ಯಾಸದ ಆಂಟಿಕ್ ಪದಕ, ಕಾಸ್ಟಿಂಗ್ ಪದಕ, ಹೊಸ ವಿನ್ಯಾಸದ ವಾಚ್ ಚೈನ್ಸ್ ಅಲ್ಲದೇ ಇನ್ನು ಹಲವು ವಿನೂತನ ವಿನ್ಯಾಸದ ಆಭರಣಗಳ ಸಂಗ್ರಹವಿದೆ.

ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಸಂಸ್ಥೆ ಬದ್ರವಾಗಿದ್ದು, ಪರಿಪೂರ್ಣತೆ ಮತ್ತು ಅಸಾಧಾರಣ ಕರಕುಶಲತೆಯ ನೈಪುಣ್ಯತೆಯಿಂದ ಹೊರಹೊಮ್ಮಿರುವ ಈ ವಿಶಿಷ್ಟ ಸಂಗ್ರಹ ಎಲ್ಲರ ಕಣ್ಮನ ಸೆಳೆಯುತ್ತದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top