ಪುತ್ತೂರು: ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಮತ್ತು ಪ್ರಗತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ ಯುಗಾದಿ ಮತ್ತು ಈದ್ ಉಲ್ ಫಿತ್ರ್ ಆಚರಿಸಲಾಯಿತು.
ಪ್ರಗತಿ ಆಸ್ಪತ್ರೆಯ ವೈದ್ಯರಾದ ಡಾ. ಅನನ್ಯಲಕ್ಷ್ಮಿ, ಸಂದೀಪ್ ಅವರು ಯುಗಾದಿ ಆಚರಣೆಯ ಮಹತ್ವವನ್ನು ತಿಳಿಸಿದರು.
ಕಾಲೇಜಿನ ಉಪನ್ಯಾಸಕಿ ಡಾ ರುಕ್ಸನಾ ರಂಜಾನ್ ಮಾಸ ಮತ್ತು ಈದ್ ಉಲ್ ಫಿತ್ರ್ ಹಬ್ಬದ ಆಚರಣೆಯ ಮಹತ್ವದ ಬಗ್ಗೆ ತಿಳಿಸಿದರು. ವಿದ್ಯಾರ್ಥಿ ಸಂಘದ ನಾಯಕ ಮೊಹಮ್ಮದ್ ಸೈಫ್ ಸ್ವಾಗತಿಸಿದರು. ನಾಯಕಿ ಧನ್ಯಶ್ರೀ ಧನ್ಯವಾದ ಸಮರ್ಪಿಸಿದರು.