ಕೆಮ್ಮಲೆ ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ವರ್ಷಾವಧಿ ಉತ್ಸವ ಹಾಗೂ ನೇಮೋತ್ಸವ ವಿವಿಧ ವೈದಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಹಾಗೂ ಶುಕ್ರವಾರ ನಡೆಯಿತು.

ಗುರುವಾರ ಬೆಳಿಗ್ಗೆ 8 ಕ್ಕೆ ಕವಾಟೋದ್ಘಾಟನೆ, 9 ಕ್ಕೆ ಗಣಹೋಮ, ಕಲಶ ಪೂಜೆ, 10 ಕ್ಕೆ ಪಂಚಾಮೃತಾಭಿಷೇಕ, ಕಲಶಾಭಿಷೇಕ, 11 ಕ್ಕೆ ಬ್ರಹ್ಮರ ಮೂಲಸ್ಥಾನದಲ್ಲಿ ಪೂಜೆ, 11.30 ಕ್ಕೆ ಮೂಲ ನಾಗದ ಕಟ್ಟೆಯಲ್ಲಿ ತಂಬಿಲ ಸೇವೆ, 12 ಕ್ಕೆ ಪರಿವಾರ ದೈವಗಳಿಗೆ ತಂಬಿಲ ಸೇವೆ, 12.30 ಕ್ಕೆ ನಾಗಬ್ರಹ್ಮ ದೇವರ ಪೂಜೆ, ಮಧ್ಯಾಹ್ನ 1 ಕ್ಕೆ ಪ್ರಸಾದ ವಿತರಣೆಯಾಗಿ ಬಳಿಕ ಅನ್ನಸಂತರ್ಪಣೆ ಜರಗಿತು.

ಸಂಜೆ 7 ಕ್ಕೆ ಶ್ರೀ ಉಳ್ಳಾಕುಲು ಭಂಡಾರ ಹಿಡಿದು, 8 ಕ್ಕೆ ಶ್ರೀ ಉಳ್ಳಾಕುಲು ನೇಮೋತ್ಸವ ನಡೆಯಿತು. ರಾತ್ರಿ 10 ಕ್ಕೆ ಕೈಕಾಣಿಕೆ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.

ಶುಕ್ರವಾರ ಬೆಳಿಗ್ಗೆ 8 ಕ್ಕೆ ಬಾಗಿಲು ತೆರೆದು 9ಕ್ಕೆ ಪಂಚಾಮೃತಾಭಿಷೇಕ, 10 ಕ್ಕೆ ಸಾಮೂಹಿಕ ನಾಗತಂಬಿಲ ಸೇವೆ, 12 ಕ್ಕೆ ಶ್ರೀ ನಾಗಬ್ರಹ್ಮ ದೇವರ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ, ಅನ್ನಸಂತರ್ಪಣೆ ಜರಗಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಹಲವಾರು ಗಣ್ಯರು ಪಾಲ್ಗೊಂಡರು.