ಪುತ್ತೂರು: ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕಾಲೇಜು ಅಭಿವೃದ್ಧಿ ಸಮಿತಿ ಮತ್ತು ವಿದ್ಯಾಭಿಮಾನಿ ಸಂಘಗಳ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ಪರೀಕ್ಷೆಯಲ್ಲಿ 5 ನೇ ರಾಂಕ್ ಪಡೆದ ಶ್ರೀವಿದ್ಯಾ ಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಸಿಡಿಸಿ ಸದಸ್ಯ ವೆಂಕಟೇಶ್ ಭಟ್ ಕೊಯಕುಡೆ ಶ್ರೀವಿದ್ಯಾಳ ಸಾಧನೆಯನ್ನು ವಿವರಿಸಿ, ನಮ್ಮ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮ ಸ್ಪೂರ್ತಿ ನೀಡಲಿ ಎಂದರು.
ಸಿಡಿಸಿ ಸದಸ್ಯ ಪ್ರವೀಣ್ ಕುಮಾರ್ ಕೆಡೆಂಜಿ ಮಾತನಾಡಿ, ಒಂದನೇ ತರಗತಿಯಿಂದ ಪಿಯುಸಿ ವರೆಗೆ ಸರಕಾರಿ ಶಾಲೆಗಳಲ್ಲಿ ಓದಿ ರಾಂಕ್ ಪಡೆದಿರುವುದು ಹೆಮ್ಮೆಯ ವಿಷಯ ಎಂದರು.
ಶ್ರೀವಿದ್ಯಾ ಳ ತಂದೆ ನಾರಾಯಣ ಭಟ್ ಮತ್ತು ತಾಯಿ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಶಂಕರ ಭಟ್ ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸ, ವಂದಿಸಿದರು. ಸಿಡಿಸಿ ಸದಸ್ಯರಾದ ಶೀನಪ್ಪ ಗೌಡ ಬೈತ ಡ್ಕ, ಸೀತಾರಾಮ ಗೌಡ ಮುಂಡಾಳ, ಸತೀಶ್ ಮಾರ್ಕಜೆ ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.