ಮುಳಿಯ –  ಹೊಸ ಲೋಗೋ-  ಅನಾವರಣ | ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್

ಪುತ್ತೂರು  : ಪುತ್ತೂರು ಮೂಲದ 81+ ವರ್ಷ ಪರಂಪರೆಯ ಮುಳಿಯ ಜ್ಯುವೆಲ್ಸ್ ಇನ್ನು ಮುಂದೆ ಹೊಸ ಲೋಗೊದೊಂದಿಗೆ ನಿಮ್ಮ ಮುಂದಿದೆ. ಜನಪ್ರಿಯ ಸೆಲೆಬ್ರಿಟಿ ರಮೇಶ್ ಅರವಿಂದ್ ಈ ಹೊಸ ಲಾಂಛನವನ್ನು ಬಿಡುಗಡೆ ಮಾಡಿದರು. ಮುಳಿಯ ಇನ್ನು ಮುಂದೆ ಮತ್ತಷ್ಟು ಹೊಸತನದೊಂದಿಗೆ ಸದಾ ಸಂತೋಷ ( creating happiness)  ನೀಡುವ ಧ್ಯೇಯ ವಾಕ್ಯದೊಂದಿಗೆ ಮುಂದುವರಿಯಲಿದೆ.

 “ಇದೇ ತಿಂಗಳು ಹೊಚ್ಚ ಹೊಸತನದೊಂದಿಗೆ ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಎಂದು ಮರುನಾಮಕರಣಗೊಳ್ಳಲಿದೆ.  ಗ್ರಾಹಕರಿಗೆ ಯಾವಾಗಲೂ ಹೊಸತನ ನೀಡುವುದು ಮುಳಿಯ ವಿಶೇಷ. ಈ ಹೊಸ ಲೋಗೋ ಆಧುನಿಕತೆಯನ್ನು ಮತ್ತು ಡಿಸೈನ್ ಎಲಿಮೆಂಟ್ ಹೊಂದಿದ್ದು ಹೊಸ ಟ್ರೆಂಡ್ ಗಳನ್ನು ಹೊರ ಸೂಸುತ್ತದೆ. ನಂಬಿಕೆ ಮತ್ತು ಪರಂಪರೆಯ ಜೊತೆಗೆ ಮುಳಿಯದ mascot ಆಗಿರುವ ಆನೆ ಮರಿ ದೃಢತೆ ಮತ್ತು ನಾಯಕತ್ವ ಮತ್ತು ಎಗ್ರೆಸಿವ್ ವಿಚಾರಗಳನ್ನು ಮುಂದಿಡುತ್ತದೆ”  ಶುದ್ಧತೆ ಮೀರಿದ ಪರಿಪೂರ್ಣತೆಯೆಡೆಗೆ ಸಾಗಿ ಬಂದು ಮುಳಿಯ ತನ್ನ ಸುತ್ತಮುತ್ತ ಸಂತೋಷ ಉಣ ಬಡಿಸಿದೆ ಎನ್ನುತ್ತಾರೆ  ಕೇಶವ ಪ್ರಸಾದ್ ಮುಳಿಯ.

ಕಳೆದ ಮೂರು ತಲೆಮಾರುಗಳಿಂದ ಗ್ರಾಹಕರ ಮತ್ತು ಜನತೆಯ ವಿಶ್ವಾಸ ಗಳಿಸಿ –  ಉಳಿಸುತ್ತಿರುವುದು ನಮ್ಮ ಮುಳಿಯ ಪರಂಪರೆ. ಜನರಿಗೆ ಚಿನ್ನದೊಂದಿಗೆ ಸಂತೃಪ್ತಿ,- ಸಂತೋಷ ನೀಡಿದ್ದೇವೆ. ನೀವು ಮನಸಾರೆ ನಮ್ಮನ್ನು ಹರಸಿದ್ದೀರಿ.. creating happiness (ಸದಾ ಸಂತೋಷ ) ನೀಡುವ ನಮ್ಮ ಹೊಸತನಗಳು ಮುಂದಿನ ದಿನಗಳಲ್ಲಿ ಇನ್ನಷ್ಟು, ಮತ್ತಷ್ಟು  ಹೊಸತನದೊಂದಿಗೆ ಬರುತ್ತಿದ್ದೇವೆ” ಎನ್ನುತ್ತಾರೆ  ಕೃಷ್ಣ ನಾರಾಯಣ ಮುಳಿಯ.































 
 

 “ಈ ಹೊಸ ಲೋಗೋವನ್ನು ಪುತ್ತೂರಿನ ಸಾಫ್ಟ್ವೇರ್ ಕಂಪನಿಯಾದ ” ದ ವೆಬ್ ಪೀಪಲ್ “ಮಾಡಿರುತ್ತದೆ” ಎಂದು ಮುಳಿಯ ಸಂಸ್ಥೆಯ ಬ್ರಾಂಡ್ ಮತ್ತು ಮಾರ್ಕೆಟಿಂಗ್ ಕನ್ಸಲ್ಟೆಂಟ್ ವೇಣು ಶರ್ಮ ಈ ಸಂದರ್ಭದಲ್ಲಿ ಲೋಗೋದ ವಿನ್ಯಾಸದ ಕುರಿತು ವಿವರಿಸಿದರು. ಸಂಸ್ಥೆಯ ಮಾರ್ಕೆಟಿಂಗ್ ವ್ಯವಸ್ಥಾಪಕ ಸಂಜೀವ ಹಾಗೂ ದ ವೆಬ್ ಪೀಪಲ್ ಪಾಲುದಾರರಾದ ಆದಿತ್ಯ ಕಲ್ಲುರಾಯ ಮತ್ತು ಶರತ್ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top