ನಿಯೋಜಿತ ಎವಿಜಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ (ನಿ.) ಪುತ್ತೂರು ಇದರ ಕಚೇರಿಯ ಸಾಂಕೇತಿಕ ಪ್ರವೇಶ ಕಾರ್ಯಕ್ರಮವು ನೆಲ್ಲಿಕಟ್ಟೆಯ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ಪ್ರಧಾನ ಕಚೇರಿಯ ಪಕ್ಕದ ಕಟ್ಟಡದ ನೆಲಮಹಡಿಯ ಡೋರ್ ನಂಬರ್ 2-842/ ‘ಎ’ಯಲ್ಲಿ ನಡೆಯಿತು.

ಎವಿಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್ ನ ಅಧ್ಯಕ್ಷರಾದ ಕಳುವಾಜೆ ವೆಂಕಟ್ರಮಣ ಗೌಡರು ದೀಪ ಪ್ರಜ್ವಲಿಸಿ ಉದ್ಘಾಟನೆಗೈದು ಸಂಸ್ಥೆಯ ಶ್ರೇಯಸ್ಸಿಗಾಗಿ ಪ್ರಾರ್ಥಿಸಿದರು.
ಸಂಸ್ಥೆಯ ಮುಖ್ಯ ಪ್ರವರ್ತಕ ಎ. ವಿ. ನಾರಾಯಣ, ಪ್ರವರ್ತಕರುಗಳಾದ ಉಮೇಶ್ ಮಳುವೇಲು, ಸೀತಾರಾಮ ಕೇವಳ, ಮಾಧವ ಪೆರಿಯತ್ತೋಡಿ ಮತ್ತು ಕಾರ್ಯ ನಿರ್ವಹಣಾಧಿಕಾರಿ ಸೀತಾರಾಮ ಗೌಡ ಕಾಂತಿಲ ಉಪಸ್ಥಿತರಿದ್ದರು.