ಪುತ್ತೂರು: ವೀರಮಂಗಲ ಪಿಎಂಶ್ರೀ ಶಾಲೆಯಲ್ಲಿ ನಡೆದ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಶಾಲಾ ವಾರ್ಷಿಕ ಚಟುವಟಿಕೆಗಳ ವರದಿಯನ್ನು “ವೀರಧಾರೆ” ಪತ್ರಿಕೆಯ ಮೂಲಕ ಬಿಡುಗಡೆ ಮಾಡಲಾಯಿತು.

ಪತ್ರಿಕೆ ಬಿಡುಗಡೆ ಮಾಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವಸಂತ ವೀರಮಂಗಲ ಮಾತನಾಡಿ, ಶಾಲೆಯಲ್ಲಿ ನಿಷ್ಕಂಲ್ಮಶವಾಗಿ ಸೇವೆ ಸಲ್ಲಿಸುವ ಮನಸ್ಸುಗಳಿದ್ದಾಗ ಪ್ರಶಸ್ತಿಗಳು ತಾನಾಗಿ ಒದಗಿ ಬರುತ್ತದೆ,ಈ ಪ್ರಶಸ್ತಿ ನಮ್ಮೂರಿಗೆ ಬಂದ ಸೌಭಾಗ್ಯ, ಅತ್ಯುತ್ತಮ ಎಸ್ ಡಿ ಎಂ ಸಿ ರಾಜ್ಯ ಪ್ರಶಸ್ತಿಯು ಇನ್ನಷ್ಟು ಪುಷ್ಠಿ ನೀಡಲಿ ಎಂದು ಶುಭ ಹಾರೈಸಿದರು.
ಅತ್ಯುತ್ತಮ ಎಸ್ ಡಿ ಎಂ ಸಿ ಪುಷ್ಠಿ ರಾಜ್ಯಪ್ರಶಸ್ತಿಯ ಅಂಗವಾಗಿ ದೊರೆತ ಒಂದು ಲಕ್ಷ ಬಹುಮಾನದಲ್ಲಿ ಶಾಲೆಗೆ ಕಂಪ್ಯೂಟರ್ ಇನವರ್ಟರ್ ಗ್ರೈಂಡರ್ ಮತ್ತು ಮೈಕಾವನ್ನು ಖರೀದಿಸಿದ್ದು ಗ್ರಾಮ.ಪಂಚಾಯಿತಿ ಸದಸ್ಯರಾದ ಪದ್ಮಾವತಿ ಇವರು ಶಾಲಾರ್ಪಣೆ ಮಾಡಿ ಶುಭ ಹಾರೈಸಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ರವಿಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗೆ ಪುಷ್ಠಿ ರಾಜ್ಯ ಪ್ರಶಸ್ತಿ ಬಂದಿರುವುದು ನಮಗೆ ಕೆಲಸ ಮಾಡಲು ಇನ್ನಷ್ಟು ಹುರುಪು ಬಂದಿದೆ. ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಕೆಲಸ ಮಾಡಿದ ಹಿಂದಿನ ಅಧ್ಯಕ್ಷರಿಗೆ ಮತ್ತು ಸರ್ವಸದಸ್ಯರಿಗೆ ಹಾಗೂ ಶಾಲಾ ಮುಖ್ಯಗುರುಗಳಿಗೆ ಶಿಕ್ಷಕ ವೃಂದದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶುಭ ಹಾರೈಸಿದರು.
ಮಾರ್ಗದರ್ಶಕ ಶಿಕ್ಷಕ ವೆಂಕಟೇಶ ಶಾಲೆಯ ಪ್ರಗತಿ ಪರಿಶೀಲನೆ ಮಾಡಿ ಮೆಚ್ಚುಗೆಯ ನುಡಿಗಳನ್ನಾಡಿದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಗುರು ತಾರಾನಾಥ ಸವಣೂರು, ಶಾಲೆಗೆ ಪುಷ್ಠಿ ಪ್ರಶಸ್ತಿ ಬರಲು ಅಹೋರಾತ್ರಿ ಕೆಲಸ ಮಾಡಿದ ಹಿಂದಿನ ಅಧ್ಯಕ್ಷರಾದ ಅನುಪಮ ಮತ್ತು ಪ್ರಸ್ತುತ ಅಧ್ಯಕ್ಷರಾದ ರವಿಚಂದ್ರ ಅವರ ತಂಡವನ್ನು ಅಭಿನಂದಿಸಿ ಶಾಲೆಯ ಅಭಿವೃದ್ಧಿಗೆ ಸಹಕರಿಸಲು ಕೋರಿದರು. ಶಾಲೆಯ ವಾರ್ಷಿಕ ಕ್ರಿಯಾಯೋಜನೆಯನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಎಲ್ ಕೆ ಜಿ,ಯುಕೇಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ ಬ್ಯಾಗ್ ಪುಸ್ತಕ ಕಿಟ್ ವಿತರಿಸಲಾಯಿತು. ಏಳನೆಯ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ರೂ 10000 ವೆಚ್ಚದ ಗ್ಲಾಸ್ ಕಪಾಟು ದೇಣಿಗೆಯಾಗಿ ನೀಡಿದರು. ಶಾಲೆಯ ಮಾತೆಯರ ಸಂಘದವರು ಮಕ್ಕಳಿಗೆ ಕಂಪಾಸ್ ಕೊಟ್ಟು ಬೀಳ್ಕೊಟ್ಟರು. ಬಳಿಕ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ಪೋಷಕರು ಮಕ್ಕಳ ಶೈಕ್ಷಣಿಕ ಪ್ರಗತಿ ಪರಿಶೀಲನೆ ಮಾಡಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ರವಿಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆದ ಎಸ್ ಡಿ ಎಂ ಸಿ ಸಭೆಯಲ್ಲಿ ಉಪಾಧ್ಯಕ್ಷೆ ನವ್ಯಾ, ಸದಸ್ಯರಾದ ಭವ್ಯ, ಅರ್ಚನಾ, ವಿನುತ, ಚಂದ್ರಾವತಿ, ನಳಿನಿ, ಹರೀಶ್ ಮಣ್ಣಗುಂಡಿ, ಸಂದೀಪ್ ಕಾಂತಿಲ, ರಝಾಕ್, ಶಾಲೆಯ ಮುಂದಿನ ಚಟುವಟಿಕೆಗಳ ಕುರಿತು ಚರ್ಚಿಸಿದರು. ಶಿಕ್ಷಕರಾದ ಶೋಭಾ, ಕವಿತಾ, ಹೇಮಾವತಿ, ಶಿಲ್ಪರಾಣಿ, ಸೌಮ್ಯ, ಸಂಚನಾ, ಸವಿತಾ ಮಧುಶ್ರೀ, ಚಂದ್ರಾವತಿ ಸಹಕರಿಸಿದರು ಶಿಕ್ಷಕಿ ಶ್ರೀಲತಾ ವಂದಿಸಿ, ಶಿಕ್ಷಕಿ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿದರು.